ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಾರ್ಡ್ ಮತ್ತು ಬೂತ್‌ಮಟ್ಟದ ಅಧ್ಯಕ್ಷರು. 
ಜಿಲ್ಲೆ

ವೃತ್ತಿ ವರ್ಗದವರ ಜತೆ ಸಂವಾದ ಅಗತ್ಯ

ನವೀನ ಬಿ.ಎಂ

ಶಿವಮೊಗ್ಗ: ಚುನಾವಣಾ ಬಾಂಡ್ ಅಕ್ರಮದ ಬಗ್ಗೆ ವೈದ್ಯರು, ವಕೀಲರು, ನಿವೃತ್ತ ಉದ್ಯೋಗಿಗಳು ಸೇರಿ ವೃತ್ತಿ ಕ್ಷೇತ್ರದ ವರ್ಗದವರೊಂದಿಗೆ ಚರ್ಚೆ, ಸಂವಾದಗಳನ್ನು ನಡೆಸುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕಿದೆ. ಇದೊಂದು ದೊಡ್ಡ ಹಗರಣವಾಗಿದ್ದು, ಹಣ ಪಡೆದು ರಶೀದಿ ಕೊಟ್ಟಿರುವ ಬಿಜೆಪಿ ಲಜ್ಜೆಗೆಟ್ಟಿದೆ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ವಾರ್ಡ್ ಮತ್ತು ಬೂತ್‌ಮಟ್ಟದ ಅಧ್ಯಕ್ಷರ ಕಾರ್ಯಾಗಾರ ಉದ್ಘಾಟಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚುನಾವಣೆ ಬಾಂಡ್ ಪಡೆದಿದ್ದರೆ ಬಿಜೆಪಿ ಹಾದಿಬೀದಿ ರಂಪಾಟ ಮಾಡುತ್ತಿತ್ತು. ಆದರೆ ಇದೀಗ ಚುನಾವಣೆಗೆ ಪಡೆದ ಹಣಕ್ಕೂ ರಶೀದಿ ಕೊಟ್ಟು ಜನರೆದುರು ಬೆತ್ತಲಾಗಿದೆ. ಬಿಜೆಪಿಯನ್ನು ವಿನಾ ಕಾರಣ ಬೆಂಬಲಿಸುತ್ತಿದ್ದವರಿಗೆ ಚುನಾವಣಾ ಬಾಂಡ್ ಪ್ರಕರಣ ಹೊರಬಂದ ಬಳಿಕ ಅರಿವಾಗಿದೆ. ವಿಷಯವನ್ನು ಗಂಭಿರವಾಗಿ ತೆಗೆದುಕೊಳ್ಳಬೇಕಿದೆ ಎಂದರು.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ 10 ಸಾವಿರ ಮತಗಳ ಲೀಡ್ ನೀಡಬೇಕು. ಒಂದೊಂದು ಮನೆಯಲ್ಲೂ ಹತ್ತು ನಿಮಿಷ ಕುಳಿತು ಜನರ ಮನವೊಲಿಸುವ ಕೆಲಸ ಮಾಡಿ ಕಾಂಗ್ರೆಸ್‌ಗೆ ಮತ ಹಾಕಿಸಿ ಬಿಜೆಪಿಯನ್ನು ಸೋಲಿಸಿದಲ್ಲಿ ಮುಂದಿನ 10 ವರ್ಷದವರೆಗೆ ದೇಶ ಸುಭೀಕ್ಷವಾಗಿರುತ್ತದೆ ಎಂದರು.