ಜಿಲ್ಲೆ

ಸಂವಹನ ಕೌಶಲ ವೃತ್ತಿಪರ ಜೀವನದ ಅವಿಭಾಜ್ಯ ಅಂಶ

ವಿಜಯಪುರ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂವಹನ ಕೌಶಲ ಪ್ರತಿಯೊಬ್ಬರ ವೃತ್ತಿಪರ ಜೀವನದ ಅವಿಭಾಜ್ಯ ಅಂಶವಾಗಿದೆ ಎಂದು ಮಹಿಳಾ ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನ್​ ರಾಜು ಬಾಗಲಕೋಟ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಇಂಗ್ಲಿಷ್​ ಅಧ್ಯಯನ ವಿಭಾಗ ಮತ್ತು ಸ್ಥಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗ ಹಾಗೂ ಪ್ರಧಾನ ಮಂತ್ರಿ ಉಚ್ಚತರ ಶಿಾ ಅಭಿಯಾನ, ಉನ್ನತ ಶಿಣ ಇಲಾಖೆ ಮತ್ತು ರಾಜ್ಯ ಉನ್ನತ ಶಿಣ ಮಂಡಳಿ ಅನುದಾನದಡಿ ಇತ್ತೀಚೆಗೆ ನಡೆದ ವೃತ್ತಿ ಕೌಶಲ ಸಂವಹನ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ೇತ್ರದಲ್ಲಿ ಯಶಸ್ಸು ಸಾಧಿಸಲು ಕೇವಲ ವಿಷಯ ಜ್ಞಾನ ಮಾತ್ರ ಸಾಕಾಗದೆ, ಸರಿಯಾದ ರೀತಿಯಲ್ಲಿ ಮಾತನಾಡುವ, ಆಲಿಸುವ ಹಾಗೂ ಅಭಿವ್ಯಕ್ತಗೊಳಿಸುವ ಕೌಶಲಗಳು ಅತ್ಯಂತ ಅಗತ್ಯವಾಗಿವೆ ಎಂದರು.ವಿದ್ಯಾರ್ಥಿಗಳ ವ್ಯಕ್ತಿತ್ವ ಪೂರ್ಣಕ್ಕೆ ಸಂವಹನ ಕೌಶಲಗಳು ಅಭ್ಯಾಸ ಮುಖ್ಯವಾಗಿದೆ. ಭಾಷೆ ಜತೆಗೆ ಹಾವಭಾವ, ಮುಖಚಯೆರ್, ಮಾತಿನ ಶೈಲಿ, ಧ್ವನಿ ಸೇರಿ ಹಲವಾರು ಅಂಶಗಳು ಸಮಾನವಾಗಿ ಪ್ರಭಾವ ಬೀರುತ್ತವೆ.

ಸಂವಹನ ಕೌಶಲಗಳು ಉತ್ತಮವಾಗಿದ್ದರೆ, ವ್ಯಕ್ತಿಯ ಆತ್ಮವಿಶ್ವಾಸ, ಸಾಮಾಜಿಕ ಸಂಪರ್ಕ ವೃದ್ಧಿ ಹಾಗೂ ಉದ್ಯೋಗವಕಾಶಗಳು ನಿಮ್ಮನ್ನು ಅರಸಿ ಬರಲಿವೆ ಎಂದು ತಿಳಿಸಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಅಮೋಸಿದ್ದ ಹಂಜಗಿ ಅಧ್ಯತೆ ವಹಿಸಿ ಮಾತನಾಡಿ, ಉತ್ತಮ ಸಂವಹನ ಕೌಶಲ ಜೀವನದಲ್ಲಿ ಪರಿಪಕ್ವತೆ ಹಾಗೂ ಪರಿಪೂರ್ಣತೆ ತಂದುಕೊಡುತ್ತದೆ ಎಂದರು.

ಕಾರ್ಯಕ್ರಮದ ಅಂಗವಾಗಿ ನಡೆದ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು. ಪ್ರಕಾಶ ಹಾವೇರಿಪೇಟ ಸ್ವಾಗತಿಸಿದರು. ದೀಪಕ ಶಿಂದೆ ವಂದಿಸಿದರು.

ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ವೃತ್ತಿ ಕೌಶಲವಾಗಿ ಸಂವಹನ ಕುರಿತ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ರಾಜು ಬಾಗಲಕೋಟ, ಡಾ. ಅಮೋಸಿದ್ದ ಹಂಜಗಿ ಮತ್ತಿತರರಿದ್ದಾರೆ.