ಬೆಳಗಾವಿ: ವಿದ್ಯಾರ್ಥಿಗಳು ಸಂವಹನ ಕೌಶಲ ಬೆಳೆಸಿಕೊಂಡು ಸ್ಪರ್ಧಾತ್ಮಕವಾಗಿ ಮುನ್ನಡೆಯಬೇಕು ಎಂದು ಒರಿಯನ್ ಹೈಡ್ರಾಲಿಕ್ಸ್ ಪ್ರೆ.ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೀತ್ ಮಚಾಡೊ ಹೇಳಿದರು.
ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಎಂಬಿಎ ವಿಭಾಗದ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿದ್ದು, ಕೇವಲ ರಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ ಇಲೆಕ್ಟ್ರಾನಿಕ್ ಉಪಕರಣ ಬಳಸಬೇಕು. ನಾಯಕತ್ವ, ನಿರ್ಧಾರ ಕೈಗೊಳ್ಳುವಿಕೆ, ಸಮಸ್ಯೆ ಪರಿಹಾರ ಮತ್ತು ಸಂಪನ್ಮೂಲ ನಿರ್ವಹಣೆ ಮುಂತಾದವುಗಳು ಉದ್ಯೋಗ ಪಡೆಯಲು ಪ್ರಮುಖ ಅಂಶಗಳೆಂದು ತಿಳಿಸಿದರು. ಎಂಬಿಎ ವಿಭಾಗದ ನಿರ್ದೇಶಕ ಡಾ.ಸೂರ್ಯಕುಮಾರ ಖನೈ ಮಾತನಾಡಿ, ಎಂಬಿಎ ವಿಭಾಗವು ಶಿಕ್ಷಣದ ಜತೆಗೆ ವೌಲ್ಯವರ‌್ತ ಚಟುವಟಿಕೆಗಳ ಬಗ್ಗೆಯೂ ಗಮನ ಹರಿಸುತ್ತಿದೆ ಎಂದರು. ಸಂಸ್ಥೆಯ ನಿರ್ದೇಶಕಿ ಡಾ.ಸೂರ್ತಿ ಅಂಗಡಿ ಪಾಟೀಲ, ರಾಜು ಜೋಶಿ, ಡಾ.ಆನಂದ ದೇಶಪಾಂಡೆ, ಸ್ನೇಹಾ ಸದಲಗೆ, ಬಸವರಾಜ ಕುಟ್ರೆ, ಪ್ರೊ.ವಿಶಾಲ ಇತರರಿದ್ದರು.