ಜಿಲ್ಲೆ

ದಾಯಾದಿಗಳ ನಡುವೆ ಜಾಗದ ಗಲಾಟೆ, ಮೃತದೇಹದ ಅಂತ್ಯಸಂಸ್ಕಾರಕ್ಕೆ ಮೂರು ದಿನ ಕಾದ ಸಂಬಂಧಿಕರು

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ತಾಲೂಕಿನ ಅರಸನಹಳ್ಳಿಯಲ್ಲಿ ಜಾಗ ವಿವಾದ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ಮೂರು ದಿನ ಸಂಬಂಧಿಕರು ಎದುರು ನೋಡಿದ್ದು ಕೊನೆಗೆ ತಾಲೂಕು ಆಡಳಿತದ ಮಧ್ಯೆ ಪ್ರವೇಶದಿಂದ ಕಾರ್ಯವು ಮುಗಿದಿದೆ.
ಕಳೆದ 3 ದಿನಗಳ ಹಿಂದೆ ಗ್ರಾಮದ ಕೋದಂಡ (55) ಹೃದಯಾಘಾತದಿಂದ ನಿಧನರಾಗಿದ್ದರು. ಮೃತರ ಅಂತಿಮ ದರ್ಶನ ಸೇರಿದಂತೆ ವಿವಿಧ ವಿಧಿ ಕಾರ್ಯಗಳು ಮುಗಿದ ಬಳಿಕ ಗ್ರಾಮದಲ್ಲಿನ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಮುಂದಾದಾಗ ದಾಯಾದಿಗಳು ವಿರೋಧಿಸಿ ಅಡ್ಡಿಪಡಿಸಿದ್ದಾರೆ. ಮೊದಲ ಎರಡು ದಿನ ಮಾತುಕತೆ, ಗಲಾಟೆ, ಗ್ರಾಮದಲ್ಲಿ ರಾಜೀ ಸಂಧಾನದಲ್ಲಿಯೇ ಕಳೆದುಹೋಗಿದೆ. ಇದರಿಂದ ರೋಸಿ ಹೋದ ಮೃತನ ಸಂಬಂಧಿಕರು ಗುರುತಿಸಿದ ಜಾಗದಲ್ಲಿ ಅವಕಾಶ ನೀಡಿದ್ದಲ್ಲಿ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದು ಮನೆಯ ಮುಂಭಾಗ ಶವವನ್ನಿಟ್ಟುಕೊಂಡು ಎದುರು ನೋಡಿದ್ದಾರೆ. ಇದರಿಂದ ಕಂಗಲಾದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

"ತಹಸೀಲ್ದಾರ್ ಮಧ್ಯೆ ಪ್ರವೇಶ
ದಾಯಾದಿಗಳ ಗಲಾಟೆಯಿಂದ ಅಂತ್ಯಸಂಸ್ಕಾರ ನೆರವೇರಿಸದೇ ಮೃತದೇಹವನ್ನು ಹಾಗೆಯೇ ಇಟ್ಟುಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಅನಿಲ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಎರಡು ಕಡೆಯವರೆಗೂ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ವಿವಾದ ಜಾಗದಲ್ಲಿ ಅಂತ್ಯಸಂಸ್ಕಾರಕ್ಕೆ ದೊಡ್ಡ ವಿರೋಧ ವ್ಯಕ್ತವಾಗಿದೆ. ಕೊನೆಗೆ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಗ್ರಾಮದ ಸ್ಮಶಾನದಲ್ಲಿ ವಿಧಿ ವಿಧಾನಗಳನ್ನು ಮುಗಿಸಲು ಸೂಚಿಸಿದ್ದಾರೆ.

*ವಿವಾದಿತ ಜಾಗದ ಸಮಸ್ಯೆ
ಗ್ರಾಮದಲ್ಲಿನ ಕೃಷಿ ಜಮೀನಿಗೆ ಸಂಬಂಧಿಸಿದಂತೆ ಮೃತ ಕೋದಂಡರ ಹಿರಿಯರಿಗೆ ಇನಾಂ ಆಗಿ ಸಿಕ್ಕಿದೆ. ಇದರಿಂದ ದಾಯಾದಿಗಳಾದ ನಾರೆಪ್ಪ ಕುಟುಂಬವು ಆಸ್ತಿ ಭಾಗಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದು ಜಾಗವು ವಿವಾದಲ್ಲಿದೆ.