ಜಿಲ್ಲೆ

ಗಣೇಶ ಹಬ್ಬದಿಂದ ಸರ್ವಧರ್ಮೀಯರಲ್ಲಿ ಸಮಾನತೆ

ಧನಂಜಯ ಎಸ್.ಹಕಾರಿ.

ಮೊಳಕಾಲ್ಮೂರು: ಸರ್ವಧರ್ಮೀಯರಲ್ಲಿ ಸಮಾನತೆ ಹುಟ್ಟು ಹಾಕುವ ಸದುದ್ದೇಶದಿಂದ ತಿಲಕರು ಆರಂಭಿಸಿದ ಗಣೇಶ ಉತ್ಸವ ನಿಜಕ್ಕೂ ಮಾದರಿಯಾಗಿದೆ ಎಂದು ಮಹಾ ಗಣಪತಿ ಸೇವಾ ಸಮಿತಿ ಗೌರವಾಧ್ಯಕ್ಷ ಡಿ.ಎಂ.ಈಶ್ವರಪ್ಪ ಹೇಳಿದರು.

ಪಟ್ಟಣದ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 56ನೇ ವರ್ಷದ ಗಣೇಶೋತ್ಸವದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಗಣೇಶ ಚತುರ್ಥಿ ಜನ ಮಾನಸದಲ್ಲಿ ದೊಡ್ಡ ಹಬ್ಬವಾಗಿ ವಿಶ್ವ ಮನ್ನಣೆ ಪಡೆದಿದೆ ಎಂದು ತಿಳಿಸಿದರು.

ಈ ಹಬ್ಬವು ದೇಶದ ಐಕ್ಯತೆ ಮತ್ತು ಏಕತೆಗಾಗಿ ಸಾರ್ವಜನಿಕರಲ್ಲಿ ಸಂಘಟನಾತ್ಮಕ ಶಕ್ತಿಯನ್ನ ತಂದುಕೊಟ್ಟಿದೆ.

ಸೆ.18ರಂದು ಗಣೇಶನ ಪ್ರತಿಷ್ಠಾಪನೆಯೊಂದಿಗೆ 7 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸರ್ವರೂ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದರು.

ಡಾ.ಪಿ.ಎಂ.ಮಂಜುನಾಥ ಮಾತನಾಡಿ, ಗಣೇಶನ ಆರಾಧನೆಯಿಂದ ನಾಡಿನಲ್ಲಿ ಆವರಿಸಿರುವ ಬರ ಹೋಗಲಾಡಿಸಿ ಮಳೆ-ಬೆಳೆ ಕರುಣಿಸಿ ಜೀವ ಸಂಕುಲಕ್ಕೆ ಸಂತಸದಾಯಕ ಜೀವನ ಹರಸಲಿ ಎಂದರು.

ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಎನ್.ಎಂ.ವಿನಯ್, ಉಪಾಧ್ಯಕ್ಷ ಬಿ.ಜಿ.ಉದಯಶಂಕರ್, ಕಾರ್ಯದರ್ಶಿ ಕೆ.ಪಿ.ಗೋಪಾಲ, ಟಿ.ರವಿಕುಮಾರ, ಡಿ.ಎಸ್.ಆನಂದ, ಎಂ.ಎಸ್.ರವೀಂದ್ರನಾಥ, ಪೃಥ್ವಿರಾಜ್, ಸಂಜೀವಮೂರ್ತಿ, ನಾಗರಾಜ್, ಎಚ್.ವಿ.ವೇಣುಗೋಪಾಲ, ಶ್ರೀವತ್ಸ, ಗೋವಿಂದರಾಜ್, ಶಿವಕುಮಾರ್ ಇತರರಿದ್ದರು.