ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವವಿದ್ಯಾಲಯದ ಬಿಎ ಪ್ರಥಮ ವರ್ಷದ 1ನೇ ಸೆಮಿಸ್ಟರ್‌ನ `ಬೆಳಗು' ಕನ್ನಡ ಪಠ್ಯಪುಸ್ತಕದಲ್ಲಿ ರಾಷ್ಟç, ಸಂವಿಧಾನ ವಿರೋಽ ಅಂಶಗಳು ಅಡಕವಾಗಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. `ಪಠ್ಯದಲ್ಲಿ ಭಾರತಾಂಬೆಗೆ ಅವಮಾನ!' ಶೀರ್ಷಿಕೆಯಡಿ `ವಿಜಯವಾಣಿ' ಜ. 22ರಂದು ಪ್ರಕಟಿಸಿದ ಲೇಖನದಲ್ಲಿ ರಾಷ್ಟçವಿರೋಽ ಅಂಶಗಳ ಮೇಲೆ ಬೆಳಕು ಚೆಲ್ಲಿತ್ತು. ಎಚ್ಚೆತ್ತುಕೊಂಡಿರುವ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತಾಽಕಾರಿಗಳು ಬುಧವಾರ ಸಾಲು ಸಾಲು ಸಭೆ ನಡೆಸಿದ್ದಾರೆ.
ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಎಸ್. ಜಯಶ್ರೀ ಅಧ್ಯಕ್ಷತೆಯಲ್ಲಿ ಬುಧವಾರ ಬೋರ್ಡ್ ಆಫ್ ಸ್ಟಡೀಸ್ (ಬಿಒಎಸ್) ಸಭೆ ನಡೆಸಲಾಯಿತು. ಇದೇವೇಳೆ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ. ಕೃಷ್ಣಾ ನಾಯಕ ಅಧ್ಯಕ್ಷತೆಯಲ್ಲಿ ಡೀನ್ಸ್ ಕಮೀಟಿ ಸಭೆ ನಡೆಯಿತು. ಪಠ್ಯಪುಸ್ತಕದಲ್ಲಿ ರಾಷ್ಟç ವಿರೋಽ, ಸಂವಿಧಾನ ವಿರೋಽ ಅಂಶಗಳಿರುವ ಕುರಿತು ಮನವಿಗಳು ಸಲ್ಲಿಕೆಯಾಗಿವೆ. ಈ ಬಗ್ಗೆ ಪರಾಮರ್ಶೆಗೆ ನಾಲ್ವರು ಸದಸ್ಯರ ಸಮಿತಿ ರಚಿಸಲು ಸಭೆಯಲ್ಲಿ ಬಿಒಎಸ್ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ನಂತರ ಕವಿವಿ ಪ್ರಭಾರ ಕುಲಪತಿ ಡಾ. ಎಸ್. ಜಯಶ್ರೀ `ವಿಜಯವಾಣಿ'ಯೊಂದಿಗೆ ಮಾತನಾಡಿ, ಪಠ್ಯಪುಸ್ತಕದಲ್ಲಿ ವಿವಾದಿತ ಅಂಶಗಳಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದೆ. ನಾಲ್ವರು ಸದಸ್ಯರು ಪಠ್ಯವನ್ನು ಪರಾಮರ್ಶಿಸಿ ತುರ್ತಾಗಿ ವರದಿ ನೀಡಲು ಸೂಚಿಸಲಾಗಿದೆ. ವರದಿ ಸಲ್ಲಿಕೆಯಾದ ನಂತರ ಪಠ್ಯ ಪರಿಷ್ಕರಣೆ ಮಾಡುವ ಕುರಿತು ನಿರ್ಧರಿಸಲಾಗುವುದು ಎಂದರು.