ಜಿಲ್ಲೆ

ಕ್ಷೇತ್ರದ ಅಭಿವೃದ್ಧಿಗೆ ಬದ್ಧ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ನಾನು ಸದಾ ಬದ್ಧ. ಸಾಧನೆಗಳ ಪಟ್ಟಿ ದೊಡ್ಡದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿಯ ಗಂಗಾಧರ ನಗರದ ವಾರ್ಡ್ ನಂ. 81ರ ಬೂತ್ ನಂ.66ರ ಅಧ್ಯಕ್ಷ ಶ್ರೀಧರ ಸಿಂಗನಹಳ್ಳಿ ಅವರ ಮನೆಗೆ ಮಹಾನಗರ ಅಧ್ಯಕ್ಷರ ಭೇಟಿ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಈ ಭಾಗದಲ್ಲಿ ಬಹಳಷ್ಟು ಮತಗಳು ಬಿಜೆಪಿಗೆ ಕೊಡಬೇಕು. ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲು ಕೈಜೋಡಿಸಬೇಕು ಎಂದರು.

ಮಹಾನಗರ ಜಿಲ್ಲಾದ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ದೇಶದಲ್ಲಿಯೇ ಪ್ರಥಮ ಬಾರಿಗೆ ಬೂತ್ ಅಧ್ಯಕ್ಷರ ಮನೆಗೆ ಜಿಲ್ಲಾಧ್ಯಕ್ಷರ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬರಲಿದೆ ಎಂದರು. ನಾಯಕರೆಲ್ಲ ಕಾರ್ಯಕ್ರಮದ ನಂತರ ಶ್ರೀಧರ ಸಿಂಗನಹಳ್ಳಿ ಅವರ ಮನೆಯಲ್ಲಿ ಉಪಹಾರ ಸೇವಿಸಿದರು.

ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೆ, ಮಾಜಿ ಮೇಯರ್ ವೀರಣ್ಣ ಸವಡಿ, ಸಂತೋಷ ಚವ್ಹಾಣ, ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಕುಲಕರ್ಣಿ, ಶಿವು ಮೆಣಸಿನಕಾಯಿ, ಪ್ರಕಾಶ ಕ್ಯಾರಕಟ್ಟಿ, ಬಸಣ್ಣ ಜಾಧವ, ಬಸವರಾಜ ಅಮ್ಮಿನಭಾವಿ, ಚಂದ್ರಶೇಖರ ಗೋಕಾಕ, ಡಾ. ಕ್ರಾಂತಿಕಿರಣ, ಪ್ರಭು ನವಲಗುಂದಮಠ, ಯಮನೂರ ಜಾಧವ, ಸಂತೋಷ ಅರಕೇರಿ, ರವಿ ನಾಯಕ ಇತರರು ಇದ್ದರು.