ಸಾಲಿಗ್ರಾಮ ಕೃಷಿ ಪತ್ತಿನ ಸಹಕಾರ ಸಂಘದ ಪ್ರಭಾರ ಅಧ್ಯಕ್ಷ ಮಂಜುನಾಥ್ ಅವರನ್ನು ಕಾಂಗ್ರೆಸ್ ಮುಖಂಡರು ಸನ್ಮಾನಿಸಿದರು. ಕಂಠಿಕುಮಾರ್, ಅರುಣ್ರಾಜ್, ಸಂತೋಷ್, ಶೌಕತ್ ,ಗುಣಪಾಲ್ ಜೈನ್ ಇದ್ದರು. 
ಜಿಲ್ಲೆ

ಸಹಕಾರ ಸಂಘದ ಅಭಿವೃದ್ಧಿಗೆ ಬದ್ಧ

ಅಭಿನಯ್ ಎಚ್.ಎಂ

ಸಾಲಿಗ್ರಾಮ: ಸಾಲಿಗ್ರಾಮ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಶಾಸಕ ಡಿ.ರವಿಶಂಕರ್ ಅವರ ಬಳಿ ಮನವಿ ಮಾಡಲಾಗುವುದು ಎಂದು ಸಂಘದ ಪ್ರಭಾರ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

ಕರುಣಾಕರ ಅವರ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ಸಂಘದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ನಡೆಸುವ ಸಂಬಂಧ ದಿನಾಂಕ ನಿಗದಿಪಡಿಸುವಂತೆ ಕಾರ್ಯದರ್ಶಿ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನೂತನ ಅಧ್ಯಕ್ಷರು ಆಯ್ಕೆಯಾಗುವವರೆಗೆ ಉಪಾಧ್ಯಕ್ಷನಾದ ನನ್ನನ್ನು ಪ್ರಭಾರ ಅಧ್ಯಕ್ಷನನ್ನಾಗಿ ಮಾಡಲಾಗಿದ್ದು, ನಿರ್ದೇಶಕರ ಮಾರ್ಗದರ್ಶನ ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ನಿರ್ದೇಶಕರಾದ ಎಸ್.ಬಿ.ಅಶೋಕ್, ಸತೀಶ್, ಮಹೇಶ್, ಅನಂತ, ಅಶ್ವಿನಿ, ಜಯರಾಮು, ರುಕ್ಮಿಣಿಯಮ್ಮ, ಸಣ್ಣದೇವಮ್ಮ, ಸಿಇಒ ಸುರೇಶ್, ಸಿಬ್ಬಂದಿ ಮಧು, ಶಶಿಕುಮಾರ್ ಇದ್ದರು.