ಬಸವನಬಾಗೇವಾಡಿ: ಸುಪ್ರೀಂಕೋರ್ಟ್ನಲ್ಲಿರುವ ಕೃಷ್ಣಾನದಿ ನೀರು ಹಂಚಿಕೆ ವ್ಯಾಜ್ಯ ಬಗೆಹರಿದರೆ ಜಿಲ್ಲೆ ಸಂಪೂರ್ಣ ನೀರಾವರಿಯಾಗಿ ಹೊರ ಹೊಮ್ಮುತ್ತದೆ ಎಂದು ಕಬ್ಬು ಅಭಿವೃದ್ಧಿ ಸಕ್ಕರೆ ಜವಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ 1.78 ಕೋಟಿ ರೂ. ವೆಚ್ಚದಲ್ಲಿ ಮನಗೂಳಿ&ಬಿಜ್ಜಳ ರಾಜ್ಯ ಹೆದ್ದಾರಿಯ ಮಧ್ಯೆ ವಿಭಜಕ ಅಭಿವೃದ್ಧಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಆಲಮಟ್ಟಿ ರಸ್ತೆಯ ಹಂಚಗಿ ಮಿಲ್ನಿಂದ ಜೈನಾಪುರ ಪವಾಡಬಸವೇಶ್ವರ ದೇವಸ್ಥಾನಕ್ಕೆ ಕೂಡುವ ರಸ್ತೆ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಸೋಮವಾರ ಅವರು ಮಾತನಾಡಿದರು.
ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿ ಪಟ್ಟಣ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಶ್ರೀದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರವಾಗುತ್ತದೆ ಎಂದು ಹೇಳಿದರು.
ಬಸವನಬಾಗೇವಾಡಿ ಪಟ್ಟಣ ಪ್ರವಾಸಿ ಸ್ಥಾನವಲ್ಲದೆ ವ್ಯಾಪಾರ& ವಹಿವಾಟು ಕೇಂದ್ರವಾಗಿ ಹೊರ ಹೊಮ್ಮುತ್ತಿದೆ. ಪಟ್ಟಣದ ಜನತೆಗೆ ಅಗತ್ಯವಿರುವ ಮೂಲಸೌಲಭ್ಯಗಳನ್ನು ಈಗಾಗಲೇ ನೀಡುತ್ತಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜಿಲ್ಲೆಯಲ್ಲಿ ಒಂದು ಮಾದರಿ ನಗರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಎ.ಪಿ.ಎಂ.ಸಿ. ಮಾಜಿ ಅಧ್ಯ ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ, ಬಸವರಾಜ ರಾಯಗೊಂಡ, ಮುದುಕು ಬಸರಕೊಡ, ಬಸವರಾಜ ಕೋಟಿ, ರವಿ ರಾಠೋಡ, ಬಸವರಾಜ ಹಾರಿವಾಳ, ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ, ಜಿ.ಪಂ ಎ.ಇ.ಇ. ವಿಲಾಸ ರಾಠೋಡ, ಪಿಡಬ್ಲುಡಿ ಎ.ಇ.ಇ. ಜೆ.ವಿ. ಕಿರಸೂರ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ, ಶರಣು ಆಲೂರ, ಪುರಸಭೆ ಜೆಇ ಸಂತೋಷ ಗಿಡ್ಡಸಣ್ಣನವರ ಇತರರಿದ್ದರು.