ನ್ಯಾಮತಿ: ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣಕ್ಕೆ ಬೇಕಿರುವ ಸೌಲಭ್ಯವನ್ನು ಒದಗಿಸಲು ಸಿದ್ಧವಿದ್ದು, ದಾಖಲೆ ಪಡೆದು ಮುಂದಿನ ವರ್ಷದೊಳಗೆ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ ಭರವಸೆ ನೀಡಿದರು.
ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ 2023-24ನೇ ಸಾಲಿನ ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ತಾಲೂಕಿನ ಒಟ್ಟು ಐದು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಖೋಖೋ, ಕಬಡ್ಡಿ, ಬ್ಯಾಡ್ಮಿಂಟನ್, ಗುಂಡು ಎಸೆತ, ರನ್ನಿಂಗ್‌ರೇಸ್ ಸೇರಿದಂತೆ ವಯಕ್ತಿಕ ಹಾಗೂ ಗುಂಪು ಕ್ರೀಡೆಗಳನ್ನು ನಡೆಸಲಾಯಿತು.
80 ಮತ್ತು ವೈಯಕ್ತಿಕ 85 ಸೇರಿ ಒಟ್ಟಾರೆ ಸಮಗ್ರ 165 ಪ್ರಶಸ್ತಿಯನ್ನ
ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಗುಂಪು ಆಟಗಳಲ್ಲಿ 80, ವೈಯಕ್ತಿಕ 85 ಪ್ರಶಸ್ತಿ ಸೇರಿದಂತೆ ಒಟ್ಟು 165 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಮಹಿಳಾ ವಿಭಾಗದಲ್ಲಿ ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರು ಗುಂಪು ಆಟದಲ್ಲಿ 75 ಮತ್ತು ವಯಕ್ತಿಕ ಕ್ರೀಡೆಗಳಲ್ಲಿ 60 ಪ್ರಶಸ್ತಿ ಪಡೆದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಈಶ್ವರಪ್ಪ ಕೆ.ಎಸ್., ಜಿಜಿಪಿಯುಸಿ ಪ್ರಾಚಾರ್ಯ ವಿ.ಪಿ.ಪೂರ್ಣಾನಂದ, ಗಂಗಾಧರ್ ನವಲೆ ಮತ್ತಿತರರು ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಂ.ಕರಿಬಸಪ್ಪ, ಉಪಾಧ್ಯಕ್ಷೆ ಆರುಂಡಿ ಲಲಿತಾ ಸೇರಿದಂತೆ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.