filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40; 
ಜಿಲ್ಲೆ

ಮೂಲ ಸೌಕರ್ಯ ಒದಗಿಸಲು ಬದ್ಧ

ರಾಘವೇಂದ್ರಗೌಡ ಭೀ ಪಾಟೀಲ್

ತಲ್ಲೂರ: ಗ್ರಾಮದ ಜನರಿಗೆ ಮೂಲ ಸೌಕರ್ಯ ಒದಗಿಸಲು ಬದ್ಧನಾಗಿದ್ದು, ಇನ್ನೂ ಹೆಚ್ಚಿನ ಅನುದಾನ ತಂದು ಗ್ರಾಮದ ಅಭಿವದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗ್ರಾಪಂ ಅಧ್ಯಕ್ಷೆ ಕವಿತಾ ಬಾಲರಡ್ಡಿ ಹೇಳಿದರು.

ಗ್ರಾಮದಲ್ಲಿ ನರೇಗಾ ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಂದು ಕಾಮಗಾರಿಗೆ ಗ್ರಾಮಸ್ಥರ ಸಹಕಾರ ಬಹಳ ಮುಖ್ಯವಾಗಿದೆ. ಸಹಕಾರ ಇದ್ದಾಗ ಮಾತ್ರ ಗ್ರಾಮಗಳ ಸರ್ವಾಂಗೀಣ ಅಭಿವದ್ಧಿ ಸಾಧ್ಯ ಎಂದರು.

ಪಿಡಿಒ ಎಚ್.ಕೆ.ಚೌರಡ್ಡಿ ಮಾತನಾಡಿ, ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಉಪಾಧ್ಯಕ್ಷೆ ಶಾಂತವ್ವ ಉಪ್ಪಾರ, ಸದಸ್ಯ ಗಂಗವ್ವ ವನ್ನೂರ, ರುಕ್ಮೀಣಿ ನಾಯ್ಕರ, ಬಸನಾಯ್ಕ ಚಿಕಾಕಿ, ಶಿವಾನಂದ ಮಲಕನ್ನವರ, ವಿಠ್ಠಲ ಉಪ್ಪಾರ, ಶಿವಪ್ಪ ನಡುವಿನಮನಿ, ಸಂಗಪ್ಪ ಬೆನಕಟ್ಟಿ, ಗೋಪಾಲ ವನ್ನೂರ, ಶೇಶಪ್ಪ ಗಯಾಳಿ ಇತರರು ಇದ್ದರು.