ಮುದ್ದೇಬಿಹಾಳದಲ್ಲಿ ನಡೆದ ವಿಶ್ವಾವಸು ನೂತನ ಸಂವತ್ಸರ ಆಚರಣೆಯಲ್ಲಿ ಡಾ. ವೀರೇಶ ಪಾಟೀಲ ಮಾತನಾಡಿದರು. ಮಹಾದೇವ ಗಾಯಕವಾಡ, ವಿಕ್ರಮ್ ಓಸ್ವಾಲ್, ಶ್ರೀಶೈಲ ದೊಡಮನಿ, ಎಸ್.ಎಸ್. ಅಂಗಡಿ, ಲಕ್ಷ್ಮಿಬಾಯಿ ತಾಡಪತ್ರೆ ಇದ್ದರು. 
ಜಿಲ್ಲೆ

ಸಂಸ್ಕೃತಿ ಉಳಿಸಿ ಬೆಳೆಸಲು ಮುಂದಾಗಿ

Vijayapura - Desk - Gurappa Lokuri

ಮುದ್ದೇಬಿಹಾಳ: ನಮ್ಮ ಸಂಸ್ಕೃತಿ ಶಕ್ತಿ ನಾವು ಅರಿತು ಇತರರಿಗೂ ಅರಿಕೆ ಮಾಡಿಕೊಟ್ಟು ಅದನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದಾಗಬೇಕು. ಯುಗಾದಿ ಸಂಸ್ಕಾರಯುತವಾಗಿ ಆಚರಿಸುವ ಹಿಂದುಗಳ ಪವಿತ್ರ ಹೊಸ ವರ್ಷದ ಹಬ್ಬವಾಗಿದೆ ಎಂದು ಬಿಜೆಪಿ ಮುಖಂಡ ಡಾ. ವೀರೇಶ ಪಾಟೀಲ ಹೇಳಿದರು.

ಇಲ್ಲಿನ ಬಸವನಗರದಲ್ಲಿರುವ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿಯಿಂದ ಶನಿವಾರ ನಡೆದ ವಿಶ್ವಾವಸು ನೂತನ ಸಂವತ್ಸರ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವರ್ತಕ ವಿಕ್ರಮ್ ಓಸ್ವಾಲ್, ಸರ್ಕಾರಿ ಪದವಿಪೂರ್ವ ಕಾಲೆಜು ಪ್ರಾಂಶಪಾಲ ಎಸ್.ಎಸ್. ಅಂಗಡಿ ಮಾತನಾಡಿದರು.

ಭಗವದ್ಗೀತಾ ಅಭಿಯಾನ ಸಮಿತಿ ಅಧ್ಯಕ್ಷ ಶ್ರೀಶೈಲ ದೊಡಮನಿ ರೂಢಗಿ ಅಧ್ಯಕ್ಷತೆ ವಹಿಸಿದ್ದರು.

ದೇವಸ್ಥಾನದ ಸದಸ್ಯರಾದ ಮಹಾದೇವ ಗಾಯಕವಾಡ, ಮರಾಠ ಸೇವಾ ಸಂಘದ ಕಾರ್ಯದರ್ಶಿ ಶಿವಾಜಿ ಬಿಜಾಪುರ, ನಿವೃತ್ತ ಮುಖ್ಯಶಿಕ್ಷಕಿ ಲಕ್ಷ್ಮೀಬಾಯಿ ತಾಡಪತ್ರೆ, ರಾಘವೇಂದ್ರ ಘಾಟಗೆ, ಮಂಜುಳಾ ಬುಡ್ಡರ, ಸುಜಾತಾ ಕಲಾದಗಿ, ಕವಿತಾ ದಡ್ಡಿ ಇದ್ದರು.

ಶಿಕ್ಷಕಿ ರಂಜಿತಾ ಭಟ್ಟ ಅವರು ಭಗವದ್ಗೀತೆಯ ಧ್ಯಾನ ಶ್ಲೋಕ ಪಠಿಸಿದರು. ಅಭಿಯಾನ ಸಮಿತಿ ಸಂಚಾಲಕ ರಾಮಚಂದ್ರ ಹೆಗಡೆ ಸ್ವಾಗತಿಸಿ, ನಿರೂಪಿಸಿದರು.