ಜಿಲ್ಲೆ

ನೇಣುಬಿಗಿದು ಯುವಕ ಆತ್ಮಹತ್ಯೆ

ಇಂದಿರಾ ಎನ್ ಕೆ

ಹೆಬ್ರಿ: ಮರ್ಣೆ ಗ್ರಾಮದ ಅರುಣ(34) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2 ದಿನಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ವಿಪರೀತ ಮದ್ಯ ಸೇವನೆ ಮಾಡುತ್ತಿದ್ದರು. ಬುಧವಾರ ತಾಯಿಯೊಂದಿಗೆ ಅಜೆಕಾರು ಪೇಟೆಗೆ ರೇಷನ್ ತರಲು ಬಂದಿದ್ದು, ನಂತರ ಅಮಲು ಪದಾರ್ಥ ಸೇವಿಸಿ ಮನೆಗೆ ತೆರಳಿದ್ದು, ಮನೆ ಹತ್ತಿರದ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.