ಹುಬ್ಬಳ್ಳಿ: ಧಾರವಾಡ ಜಿಲ್ಲಾ ವಾಣಿಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆ ಹಾಗೂ ಉಣಕಲ್ಲ ಶ್ರೀನಗರದ ಚೇತನ ಕಾಲೇಜ ಆಫ್ ಕಾಮರ್ಸ್ (ಬಿಬಿಎ ಮತ್ತು ಬಿಸಿಎ) ಇವರ ಸಂಯುಕ್ತ ಆಶ್ರಯದಲ್ಲಿ "ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರ ವಿಷಯಗಳ ಕಾರ್ಯಾಗಾರ'ವನ್ನು ಚೇತನಾ ಕಾಲೇಜು ಆವರಣದಲ್ಲಿ ಗುರುವಾರ ಏರ್ಪಡಿಸಲಾಗಿತ್ತು.
ಧಾರವಾಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕಿ ಡಾ. ತೇಜಸ್ವಿನಿ ನಾರಾಯಣಕರ್ ಕಾರ್ಯಕ್ರಮ ಉದ್ಘಾಟಿಸಿದರು. ಧಾರವಾಡ ಜಿಲ್ಲಾ ವಾಣಿಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಎಸ್.ಎಸ್. ಹಿರೇಗೌಡರ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಬೆಂಗಳೂರು ಸೌಂದರ್ಯ ಕಾಲೇಜಿನ ಪ್ರಾಚಾರ್ಯ ಮಹಾಬಳೇಶ್ವರ ತುಂಗಾ, ಹಿರಿಯೂರು ಕಾಲೇಜಿನ ಹಿರಿಯ ಉಪನ್ಯಾಸಕಿ ಲಕ್ಷ್ಮೀ ಬಿ.ಕೆ., ಬೆಳಗಾವಿ ಕೆ.ಕೆ. ಕೊಪ್ಪ ಕಾಲೇಜಿನ ಹಿರಿಯ ಉಪನ್ಯಾಸಕ ವಿಠಲ್ ಕಾಮಕರ ಅವರು, ನೂತನ ಪಾಠ ಕ್ರಮ ಹಾಗೂ ಅಧ್ಯಾಪನ ತಂತ್ರಗಳ ಬಗ್ಗೆ ಉಪನ್ಯಾಸ ನೀಡಿದರು.
ಜಿಲ್ಲೆಯ ವಾಣಿಜ್ಯಶಾಸ್ತ್ರ ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಬೋಧನಾ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದರು.
ವಿಜಯನಗರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಂದೀಪ ಬೂದಿಹಾಳ, ನಲವಡಿಯ ಎಸ್.ಕೆ.ಟಿ.ಎಂ. ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಹನುಮಂತಪ್ಪ ಡಿ., ಹಾಗೂ ಚೇತನ ಕಾಲೇಜ ಆಫ್ ಕಾಮರ್ಸ್ ನಿರ್ದೇಶಕ ಡಾ. ವಿಶ್ವನಾಥ ಕೊರವಿ, ವೇದಿಕೆಯ ಸಿ.ವಿ. ಪುಟ್ಟಣ್ಣವರ, ಡಾ. ನಿಧಿ ದೇಶಪಾಂಡೆ, ಡಾ. ಶಿಲ್ಪಾ ಕುಲಕರ್ಣಿ, ಪ್ರೊ. ಗೌರಿ ಬಿ, ಪ್ರೊ. ಶರತ್ ರಾಯರ್ ಉಪಸ್ಥಿತರಿದ್ದರು.
ಪ್ರೊ. ಭಾಗ್ಯಶ್ರೀ ಬಳಿಗಾರ ಕಾರ್ಯಕ್ರಮ ನಿರೂಪಿಸಿದರು.