ಪಳ್ಳತ್ತಾರು ಶಾಲೆಯಲ್ಲಿ ನೂತನವಾಗಿ ಆರಂಭಗೊಂಡ ಎಲ್ಕೆಜಿ ಮತ್ತು ಯುಕೆಜಿ ತರಗತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಶೀಲಾನ್ಯಸ ನೆರವೇರಿಸಿದರು. 
ಜಿಲ್ಲೆ

ಯಶಸ್ಸಿಗೆ ಶಾಲೆಯೇ ಮೊದಲ ಮೆಟ್ಟಿಲು : ಶಾಸಕಿ ಭಾಗೀರಥಿ ಮುರುಳ್ಯ

ವಿಜಯಯವಾಣಿ ಸುದ್ದಿಜಾಲ ಕಡಬ

ಮೌಲ್ಯ ತುಂಬಿದ ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕಾರ ನೀಡುವ ಹೊಣೆಗಾರಿಕೆಯನ್ನು ಪಾಲಕರು ಜತೆಯಾಗಿ ನಿರ್ವಹಿಸಬೇಕು. ಮಕ್ಕಳ ಹಾಗೂ ನಮ್ಮ ಜೀವನ ಯಶಸ್ವಿಯಾಗಿಸುವುದರಲ್ಲಿ ನಮ್ಮೂರಿನ ಶಾಲೆಯ ಪಾತ್ರವೂ ಇದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳೀದರು.

ಬೆಳಂದೂರು ಗ್ರಾಮದ ಪಳ್ಳತ್ತಾರು ಸ.ಹಿ.ಪ್ರಾ.ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ಪ್ರಾರಂಭೋತ್ಸವ ಮತ್ತು ದಾನಿಗಳ ಸಹಕಾರದಿಂದ ನೂತನವಾಗಿ ನಿರ್ಮಾಣವಾಗಲಿರುವ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಉಮ್ಮರ್ ಶಾಫಿ ಅಧ್ಯಕ್ಷತೆ ವಹಿಸಿದ್ದರು. ಬೆಳಂದೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಬೀರ, ಪಿಡಿಒ ನಾರಾಯಣ್, ಗ್ರಾಪಂ ಸದಸ್ಯರಾದ ತೇಜಾಕ್ಷಿ ಕೊಡಂಗೆ, ಉಮೇಶ್ವರಿ ಅಗಳಿ, ಲೋಹಿತಾಕ್ಷ ಕೆಡೆಂಜಿಕಟ್ಟ, ಹರಿಣಾಕ್ಷಿ ಬನಾರಿ, ಜಯರಾಮ ಬೆಳಂದೂರು, ಪಳ್ಳತ್ತಾರು ಶಾಲೆಯ ಸ್ಥಾಪಕಾಧ್ಯಕ್ಷ ನಿರ್ಮಲ್ ಕುಮಾರ್ ಜೈನ್, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ನಿರ್ಮಲಾ ಕೇಶವ ಅಮೈ, ಎಸ್‌ಡಿಎಂಸಿ ಕೇಂದ್ರ ಸಮಿತಿ ಕಾರ್ಯದರ್ಶಿ ಸಾಜಸ್, ಸಂಪತ್‌ಕುಮಾರ್ ರೈ ಪಾತಾಜೆ, ವಕೀಲ ಅವಿನಾಶ್ ಬೈತಡ್ಕ, ಸುಪ್ರೀತ್ ಕುಮಾರ್ ಜೈನ್ ಬೆಳಂದೂರು, ಶಾಲಾ ಮುಖ್ಯಗುರು ಸೀತಾರಾಮ ಕೆ ಜಿ, ಶಿಕ್ಷಕರಾದ ರಂಗನಾಥ, ಝರೀನಾ ಮೊದಲಾದವರು ಉಪಸ್ಥಿತರಿದ್ದರು. ನವಾಜ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪೂರ್ಣಿಮಾ ವಂದಿಸಿದರು.