ಬಸವಕಲ್ಯಾಣ: ಕಾಯಕದ ಜತೆಗೆ ಮನದ ಮೈಲಿಗೆಯನ್ನು ತೊಳೆದ ಶ್ರೇಷ್ಠ ಶರಣರು ವೀರ ಗಣಾಚಾರಿ ಮಡಿವಾಳ ಮಾಚಿದೇವರು ಎಂದು ಮುಚಳಂಬನ ಶ್ರೀ ಪ್ರಣವಾನಂದ ಸ್ವಾಮೀಜಿ ನುಡಿದರು.
ಮಡಿವಾಳ ಸಮಾಜದಿಂದ ಮಡಿವಾಳ ಮಾಚಿದೇವರ ದೇವಸ್ಥಾನ(ಹೊಂಡ) ಪರಿಸರದಲ್ಲಿ ಸೋಮವಾರ ಆಯೋಜಿಸಿದ್ದ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಸ್ಮರಣೋತ್ಸವ ಮತ್ತು ಶ್ರೀ ಮಾಚಿದೇವರ ತತ್ವ ದರ್ಶನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಾಚಿದೇವರ ತತ್ವ-ಸಂದೇಶಗಳನ್ನು ಅರಿತು ಜೀವನದಲಿ ಅಳವಡಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪದ ಸಂಚಾಲಕರಾದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ದೇವರಿಗೆ ಸವಾಲು ಹಾಕಿದ ನಿರ್ಭಯ ಗಣಾಚಾರಿ ಶರಣರು ಮಡಿವಾಳ ಮಾಚಿದೇವರು. ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಅವರ ಕೊಡುಗೆ ದೊಡ್ಡದು ಎಂದರು.
ಸಮಾರAಭವನ್ನು ಉದ್ಘಾಟಿಸಿದ ಬೀದರ್ ಮಡಿವಾಳ ಸಮಾಜದ ಗೌರವಾಧ್ಯಕ್ಷ ದಿಗಂಬರ ಮಡಿವಾಳ ಮಾತನಾಡಿ, ಶೈಕ್ಷಣಿಕ ಪ್ರಗತಿಯಲ್ಲಿ ಸಮಾಜದ ಪ್ರಗತಿ ಅಡಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರ ನೀಡುವಲ್ಲಿ ಪಾಲಕರು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ಸಮಾಜದ ಪ್ರಗತಿಗೆ ಪ್ರಯತ್ನಿಸುವ ಜತೆಗೆ ಅಗತ್ಯ ಸಹಾಯಕ-ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನೇತೃತ್ವ ವಹಿಸಿದ್ದ ಬಂದವರ ಒಣಿ ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕೆ ತಾಯಿ ಅನುಭಾವ ನೀಡಿದರು. ಸಮಾಜದ ತಾಲೂಕು ಅಧ್ಯಕ್ಷ ಗಣಪತಿ ಸಸ್ತಾಪುರೆ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ಕಲ್ಯಾಣಮ್ಮ, ಸಮಾಜದ ಭಾಲ್ಕಿ ಅಧ್ಯಕ್ಷ ದಿಲೀಪ ಮಡಿವಾಳ, ಚಿಡಗುಪ್ಪಾ ಅಧ್ಯಕ್ಷ ಬಸವರಾಜ ಮಡಿವಾಳ, ಹುಮನಾಬಾದ್ ಅಧ್ಯಕ್ಷ ದತ್ತು ಮಡಿವಾಳ, ಪ್ರಮುಖರಾದ ವಿಜಯಕುಮಾರ ಮಡಿವಾಳ, ವೀರಶೆಟ್ಟಿ ಮಡಿವಾಳ, ಜಗನ್ನಾಥ ಮಡಿವಾಳ, ಆಕಾಶ ಮಡಿವಾಳ, ರಾಜಕುಮಾರ ಮಡಿವಾಳ, ಜಗನ್ನಾಥ ಮಡಿವಾಳ, ದಶರಥ ಮಡಿವಾಳ, ಭಗವಾನ್ ಮಡಿವಾಳ, ವಿಶ್ನಾಥ ಮಡಿವಾಳ ಇತರರಿದ್ದರು.
ಬಸವರಾಜ ಮಡಿವಾಳ ಸ್ವಾಗತಿಸಿದರು. ಸಂತೋಷ ಮಡಿವಾಳ ನಿರೂಪಣೆ ಮಾಡಿದರು.
ಶ್ರೀ ಬಸವೇಶ್ವರ ದೇವಸ್ಥಾನದಿಂದ ಮುಖ್ಯ ಮಾರ್ಗವಾಗಿ ಹರಳಯ್ಯ ವೃತ್ತದ ಮೂಲಕ ಮಡಿವಾಳ ಮಾಚಿದೇವರ ಹೊಂಡದವರೆಗೆ ವಾಹನದಲ್ಲಿ ಮಾಚಿದೇವರ ಭಾವ ಚಿತ್ರದ ಭವ್ಯ ಮೆರವಣಿಗೆ ಜರುಗಿತು. ಮೆರವಣಿಗೆಗೆ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದರು.