ಗುಳೇದಗುಡ್ಡದಲ್ಲಿ ಶ್ರೀ ವಿಜಯಾನಂದ ಸ್ವಾಮಿ ಮಹಾರಾಜರ 52ನೇ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಶ್ರೀಗಳ ಭಾವಚಿತ್ರ ಮೆರವಣಿಗೆ ನಡೆಯಿತು. ಚಿದಾನಂದಸಾ ಕಾಟವಾ, ಲಕ್ಷ್ಮಣ ಗೋಟೂರ, ಶಿವಸಂಗಪ್ಪ ರಾಜನಾಳ, ನಾಗೇಶ ದ್ಯಾವನಕೊಂಡಿ, ಚನ್ನವೀರ ಶ್ಯಾವಿ, ತಿಪ್ಪಣ್ಣ ನಾಗರಶೆಟ್ಟಿ, ಶಿವು ಭಾಪ್ರಿ, ಭರತ ಪವಾರ ಮತ್ತಿತರರಿದ್ದಾರೆ. 
ಜಿಲ್ಲೆ

ವಿಜಯಾನಂದರ ಪುಣ್ಯಸ್ಮರಣೋತ್ಸವ

Vijayapura - Desk - Gurappa Lokuri

ಗುಳೇದಗುಡ್ಡ: ನಗರದ ಸದ್ಗುರು ಶ್ರೀ ವಿಜಯಾನಂದರ ಅಧ್ಯಾತ್ಮ ಕೇಂದ್ರದಲ್ಲಿ ವಿಜಯಾನಂದ ಸ್ವಾಮಿ ಮಹಾರಾಜರ 52ನೇ ಪುಣ್ಯಸ್ಮರಣೆ ಮಂಗಳವಾರ ಸಂಭ್ರಮದಿಂದ ನಡೆಯಿತು.

ಬೆಳಗ್ಗೆ ಕತೃ ಗದ್ದುಗೆಗೆ ರುದ್ರಾಭಿಷೇಕ, ಕಾಕಡಾರತಿ, ನಂತರ ನಗರದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಮೆರವಣಿಗೆ ನಡೆಯಿತು. ಭಜನೆ, ಕರಡಿಮಜಲು ಕಲಾವಿದರು ಹಾಗೂ ಸುಮಂಗಲಿಯರು ಕಳಸದೊಂದಿಗೆ ಭಾಗವಹಿಸಿದ್ದರು.

ಚಿದಾನಂದಸಾ ಕಾಟವಾ, ಲಕ್ಷ್ಮಣ ಗೋಟೂರ, ಶಿವಸಂಗಪ್ಪ ರಾಜನಾಳ, ನಾಗೇಶ ದ್ಯಾವನಕೊಂಡಿ, ಚನ್ನವೀರ ಶ್ಯಾವಿ, ತಿಪ್ಪಣ್ಣ ನಾಗರಶೆಟ್ಟಿ, ಶಿವು ಭಾಪ್ರಿ, ಭರತ ಪವಾರ, ರಾಚಣ್ಣ ಕೆರೂರ, ದಿಲೀಪ ತೆಗ್ಗಿ, ಶಂಕರ ಮುಂದಿನಮನಿ ಮತ್ತಿತರರಿದ್ದರು.