ಕೊಳ್ಳೇಗಾಲ: ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಜಯಣ್ಣ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಮಹದೇಶ್ವರ ಕಾಲೇಜು ಸಮೀಪವಿರುವ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಎಸ್.ಜಯಣ್ಣ ಅವರ ಭಾವಚಿತ್ರಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಪುಷ್ಪಾರ್ಚನೆ ಮಾಡಿದರು. ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಪಂ ಮಾಜಿ ಸದಸ್ಯ ಯೋಗೇಶ್, ಕೊಪ್ಪಾಳಿ ಮಹದೇವ ನಾಯಕ, ತಾಪಂ ಮಾಜಿ ಉಪಾಧ್ಯಕ್ಷ ಎಸ್.ಬಸವಣ್ಣ, ನಗರಸಭೆ ಸದಸ್ಯ ಶಾಂತರಾಜು, ರಾಮಕೃಷ್ಣ, ಕಿರಣ್, ಬಸವೇಶ್ವರ ಹೋಟೆಲ್ ಮಾಲೀಕ ಪರಶಿವಮೂರ್ತಿ, ಪ್ರಕಾಶ್, ಮುಡಿಗುಂಡ ಶಾಂತರಾಜು, ಉದಯಕುಮಾರ್, ಮಹೇಂದ್ರ, ಬಾಬು, ಸ್ವಾಮಿನಂಜಪ್ಪ, ಕುಮಾರ್ ಮತ್ತಿತರರಿದ್ದರು.