ಪಂಚವರ್ಣ ಕಚೇರಿಯಲ್ಲಿ ನಟ ದಿ.ಪುನೀತ್‌ರಾಜ್‌ಕುಮಾರ್ ಅವರ ಮೂರನೇ ಪುಣ್ಯಸ್ಮರಣೆಯಲ್ಲಿ ಸೀತಾರಾಮ ಆಚಾರ್ ಮಾತನಾಡಿದರು 
ಜಿಲ್ಲೆ

ಕೋಟದಲ್ಲಿ ನಟ ಪುನೀತ್ ಪುಣ್ಯಸ್ಮರಣೆ

ಕೋಟ: ಇಲ್ಲಿನ ಪಂಚವರ್ಣ ಕಚೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಳಿ ನೇತೃತ್ವದಲ್ಲಿ ನಟ ದಿ.ಪುನೀತ್‌ರಾಜ್‌ಕುಮಾರ್ ಅವರ ಮೂರನೇ ಪುಣ್ಯಸ್ಮರಣೆ ಮಂಗಳವಾರ ನಡೆಯಿತು.

ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಮಾಜಿ ಅಧ್ಯಕ್ಷ ಸೀತಾರಾಮ ಆಚಾರ್ ಪುನೀತ್ ಕುರಿತು ಗುಣಗಾನಗೈದರು. ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಎಚ್.ಕುಂದರ್ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ಮಂಡಲ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಪುನೀತ್‌ರಾಜ್‌ಕುಮಾರ್ ಅಭಿಮಾನಿ ಬಳಗ ಮುಖ್ಯಸ್ಥ ದಿನೇಶ್ ಆಚಾರ್ ಮಣೂರು ಉಪಸ್ಥಿತರಿದ್ದರು. ಸುಜಾತ ಬಾಯರಿ ಸ್ವಾಗತಿಸಿದರು. ರವೀಂದ್ರ ಕೋಟ ವಂದಿಸಿದರು. ಸಂತೋಷ್‌ಕುಮಾರ್ ಕೋಟ ನಿರೂಪಿಸಿದರು.