ಕುಕನೂರು: ಹೆತ್ತ ತಾಯಿ, ತಂದೆಯ ಋಣ ತೀರಿಸಲು ಸಾಧ್ಯವಿಲ್ಲ. ಅವರ ಸ್ಮರಣಾರ್ಥ ಬಡವರ ಸೇವೆ ಮಾಡಿ ನೆನಪು ಮಾಡಿಕೊಳ್ಳಬಹುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜಿನಲ್ಲಿ ದಿ.ಅನುಸೂಯಮ್ಮ ಹನುಮಂತಪ್ಪ ಚೌಧರಿ ಇವರ 10ನೇ ವರ್ಷದ ಪುಣ್ಯ ಸ್ಮರಣಾರ್ಥಕ ಅಂಗವಾಗಿ ಮಲ್ಲಿಕಾರ್ಜುನ ಚೌಧರಿ ಮತ್ತು ಕುಟುಂಬ ಬಳಗದಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.
ಅನುಸೂಯಮ್ಮ ದಿವಂಗತರಾಗಿ ಹತ್ತು ವರ್ಷಗಳಾಗಿವೆ. ಅವರ ಕುಟುಂಬಸ್ಥರು ಸ್ಮರಣಾರ್ಥವಾಗಿ ಪ್ರತಿವರ್ಷ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸುತ್ತಿವೆ. ಪ್ರತಿಯೊಬ್ಬರು ಪಾಲಕರ ಋಣದಲ್ಲಿ ಬದುಕುತ್ತಿರುವುದನ್ನು ಮರೆಯಬಾರದು ಎಂದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣವರ್ ಮಾತನಾಡಿದರು.
ಇದನ್ನೂ ಓದಿ: KN Rajanna Speaks About BJP-JDS Alliance | ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಕೆ.ಎನ್. ರಾಜಣ್ಣ ಪ್ರತಿಕ್ರಿಯೆ!
ಆಯೋಜಕ ಪಪಂ ಸದಸ್ಯ ಮಲ್ಲಿಕಾರ್ಜುನ ಚೌಧರಿ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶಿವಕುಮಾರ ಹೆಳವರ, ಪಪಂ ಸದಸ್ಯ ಗಗನ ನೋಟಗಾರ, ಪ್ರಮುಖರಾದ ಈರಪ್ಪ ಹೂಗಾರ, ವೀರೇಶ ಸಬರದ, ಸಾಧೀಕ್ ಪಾಷಾ ಖಾಜಿ, ಬಾಲರಾಜ ಗಾಳಿ, ಮಂಜುನಾಥ ನಾಡಗೌಡ್ರು, ಮಯೂರ ತಳವಾರ, ರಂಗನಾಡಗೌಡ್ರು ಇತರರಿದ್ದರು.