ಮಂಡ್ಯ: ಸಮ್ಮೇಳನದ ಅಂಗವಾಗಿ ಹೊರತರುತ್ತಿರುವ ಸ್ಮರಣ ಸಂಚಿಕೆ 10 ವಿಭಾಗವನ್ನು ಹೊಂದಿರಲಿದ್ದು, ಇದಕ್ಕೆ ತಕ್ಕಂತೆ ಸಿದ್ಧತೆ ನಡೆಯುತ್ತಿದೆ ಎಂದು ಸ್ಮರಣ ಸಂಚಿಕೆ ಸಮಿತಿ ಸಮಿತಿ ಸದಸ್ಯರೂ ಆದ ಸಾಹಿತಿ ಡಾ.ಬೋರೇಗೌಡ ಚಿಕ್ಕಮರಳಿ ಮಾಹಿತಿ ನೀಡಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಮೊದಲ ಐದು ಭಾಗದಲ್ಲಿ ಆರ್ಶೀವಚನ, ಅಭಿಪ್ರಾಯಗಳಿರಲಿವೆ. ಉಳಿದ ಐದು ಭಾಗದಲ್ಲಿ ಮಂಡ್ಯ ಜಿಲ್ಲೆಯ ಸಮಗ್ರ ಪರಿಚಯ, ಕರ್ನಾಟಕ ರಾಜ್ಯದ ಚಿತ್ರಣ, ವಿಶ್ವ ಕರ್ನಾಟಕ ಎನ್ನುವ ಭಾಗದಲ್ಲಿ ಹೊರರಾಜ್ಯ, ದೇಶದಲ್ಲಿರುವ ಕನ್ನಡಿಗರ ಬದುಕು, ಹೋರಾಟ, ಸಾಧನೆಯ ಪರಿಚಯ, ಅಭಿವೃದ್ಧಿ ಭಾರತ ಹಾಗೂ ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಮಹತ್ವ ಸಾರುವ ಘಟನಾವಳಿಯ ಭಾವಚಿತ್ರ, ಟಿಪ್ಪಣಿ ಹೊಂದಿರುವ ಚಿತ್ರಸಂಪುಟವಿರಲಿದೆ. ಆದ್ದರಿಂದ ಇದನ್ನು ಸ್ಮರಣ ಸಂಚಿಕೆ ಎನ್ನುವುದಕ್ಕಿಂತ ನೆನಪಿನ ಸಂಚಿಕೆ ಎನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದರು.