ಗಂಗಾವತಿ ಎಐಸಿಸಿಟಿಯು ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾ ಜರುಗಿತು. ರಾಜ್ಯ ಉಪಾಧ್ಯಕ್ಷ ಜೆ.ಭಾರದ್ವಾಜ್, ಸದಸ್ಯ ಪಿ.ಆರ್.ಎಸ್.ಮಣಿ, ಜಿಲ್ಲಾಧ್ಯಕ್ಷ ಸಣ್ಣ ಹನುಮಂತಪ್ಪ ಹುಲಿಹೈದರ್ ಇತರರಿದ್ದರು. 
ಜಿಲ್ಲೆ

ನ್ಯಾಯ ಕೊಡಿಸಿದ ಹುತಾತ್ಮರನ್ನು ಸ್ಮರಿಸಿ

ರುದ್ರಪ್ಪ ವಾಲಿ

ಗಂಗಾವತಿ: ಕಾರ್ಮಿಕ ಹಕ್ಕುಗಳಿಗಾಗಿ ಸಂಘಟಿತ ಹೋರಾಟದ ಅಗತ್ಯವಿದ್ದು, ಸೌಲಭ್ಯಕ್ಕಾಗಿ ಹುತಾತ್ಮರಾದ ಕಾರ್ಮಿಕರನ್ನು ನಿತ್ಯವೂ ಸ್ಮರಿಸಬೇಕಿದೆ ಎಂದು ಎಐಸಿಸಿಟಿಯು ರಾಜ್ಯ ಉಪಾಧ್ಯಕ್ಷ ಜೆ.ಭಾರದ್ವಾಜ್ ಹೇಳಿದರು.

ನಗರದ 20ನೇ ವಾರ್ಡ್ ಛಲವಾದಿ ಓಣಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿಶ್ವ ಕಾರ್ಮಿಕ ದಿನ ನಿಮಿತ್ತ ಎಐಸಿಸಿಟಿಯು ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದರು. ಈ ಹಿಂದೆ ದಿನಕ್ಕೆ 12 ಗಂಟೆ ಕಾಲ ಕೆಲಸ ಮಾಡಬೇಕಿತ್ತು. ಅದನ್ನು ವಿರೋಧಿಸಿ ಹೋರಾಟ ನಡೆಸಿ ನ್ಯಾಯ ಕೊಡಿಸಿದ ಹುತಾತ್ಮ ಕಾರ್ಮಿಕರನ್ನು ನಾವು ಎಂದಿಗೂ ಮರೆಯಬಾರದು. ಕಾರ್ಮಿಕ ದಿನ ಕಡ್ಡಾಯ ಅಚರಿಸಬೇಕಿದ್ದು, ಸಂಘಟನೆಯಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಿಸಬೇಕಿದೆ ಎಂದರು.

ಕಾರ್ಮಿಕರ ದಿನಾಚರಣೆ ಉದ್ದೇಶ, ಹೋರಾಟ ಮತ್ತು ಹಕ್ಕುಗಳ ಕುರಿತು ರಾಜ್ಯ ಸಮಿತಿ ಸದಸ್ಯ ಪಿ.ಆರ್.ಎಸ್.ಮಣಿ ಮಾತನಾಡಿದರು. ಇತ್ತೀಚಿಗೆ ನಿಧನರಾದ ಹಿರಿಯ ಹೋರಾಟಗಾರ ಡಾ.ಲಕ್ಷ್ಮಿನಾರಾಯಣರಿಗೆ ಮೌನಾಚರಣೆಯೊಂದಿಗೆ ಗೌರವ ಸಲ್ಲಿಸಲಾಯಿತು. ಇದಕ್ಕೂ ಮುಂಚೆ ನಗರದಾದ್ಯಂತ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಧ್ಯಕ್ಷ ಸಣ್ಣ ಹನುಮಂತಪ್ಪ ಹುಲಿಹೈದರ್, ಪದಾಧಿಕಾರಿಗಳಾದ ವಿಜಯ ದೊರೈರಾಜು, ಪರಶುರಾಂ, ಬಾಬರ್, ಕೆ.ರಮೇಶ, ಮಾಯಮ್ಮ, ಚಾಂದಾಪಾಷಾ, ಹನುಮಂತ ಚೌಡಯ್ಯ, ಅಮೀರ್‌ಅಲಿ, ಕೇಶವನಾಯ್ಕ, ಪಾರ್ವತೆಮ್ಮ ಇತರರಿದ್ದರು.