ಜಿಲ್ಲೆ

ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ

ಲಲಾಟಾಕ್ಷ ಎಸ್

ಮದ್ದೂರು: ಪಟ್ಟಣದಲ್ಲಿ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.


ಸೋಮವಾರ ಪಟ್ಟಣದ ಹೊಳೆ ಬೀದಿಯಲ್ಲಿರುವ ಮಸೀದಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮಳವಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಮಕ್ಕಳು ಸೇರಿದಂತೆ ಎಲ್ಲರೂ ಶುಭಾಶಯ ವಿನಿಮಯ ಮಾಡಿಕೊಂಡರು. ಮದ್ದೂರು ಪಟ್ಟಣ, ಕೆಸ್ತೂರು, ಕೊಪ್ಪ, ಬೆಸಗರಹಳ್ಳಿ ಸೇರಿದಂತೆ ಹಲವೆಡೆ ಸಡಗರದಿಂದ ಹಬ್ಬ ಆಚರಿಸಿದರು.