ತರೀಕೆರೆಯಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಡಾ.ಎಲ್.ಆರ್.ಗೌತಮ್ ಉದ್ಘಾಟಿಸಿದರು. ಡಾ.ಬಿ.ವಿ.ಕಿಶೋರ್‌ಕುಮಾರ್, ಪಿ.ಶಶಿಕುಮಾರ್, ಡಾ.ಕಾವ್ಯಶ್ರೀ ಇತರರಿದ್ದರು. 
ಜಿಲ್ಲೆ

ಉತ್ತಮ ಆರೋಗ್ಯದಿಂದ ನೆಮ್ಮದಿಯ ಜೀವನ

ಜಿ.ಹೆಚ್. ಧನ್ಯಕುಮಾರ್

ತರೀಕೆರೆ: ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ನೆಮ್ಮದಿಯ ಜೀವನ ನಡೆಸಬಹುದು ಎಂದು ಸರ್ಕಾರಿ ಆಯುರ್ವೇದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಎಲ್.ಆರ್.ಗೌತಮ್ ಹೇಳಿದರು.
ಪಟ್ಟಣದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ, ದೈನಂದಿನ ಒತ್ತಡದಿಂದ ಜನ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಮನೋಲ್ಲಾಸಕ್ಕಾಗಿ ಧ್ಯಾನ, ಯೋಗ, ವ್ಯಾಯಾಮ ಮತ್ತು ವಾಯುವಿಹಾರ ನಡೆಸುವುದು ಉತ್ತಮ. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ವಿವಿಧ ರೋಗಗಳಿಗೆ ಪರಿಹಾರ ಸಿಗಲಿದ್ದು, ಬಂಜೆತನಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ದೊರೆಯಲಿದೆ ಎಂದರು.
ಪಟ್ಟಣದ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಪಟ್ಟಣ ಮಾತ್ರವಲ್ಲದೇ, ತಾಲೂಕಿನ ಗ್ರಾಮೀಣ ಪ್ರದೇಶಗಳಿಂದಲೂ ವಿವಿಧ ರೋಗಕ್ಕೆ ತುತ್ತಾಗಿರುವ ರೋಗಿಗಳು ಬರುತ್ತಿದ್ದಾರೆ. ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ತ್ವರಿತವಾಗಿ ಕಾಯಿಲೆ ಉಪಶಮನವಾಗುತ್ತಿದ್ದು, ಇಲ್ಲಿನ ವೈದ್ಯರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಎಂದು ಹೇಳಿದರು.
ಉಚಿತ ಆರೋಗ್ಯ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರಿಗೆ ವಿವಿಧ ರೋಗಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಸರ್ಕಾರಿ ಆರ್ಯುವೇದ ಆಸ್ಪತ್ರೆ ವೈದ್ಯರಾದ ಡಾ.ಬಿ.ವಿ.ಕಿಶೋರ್‌ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ಪಿ.ಶಶಿಕುಮಾರ್, ಡಾ.ಕಾವ್ಯ ಶ್ರೀ, ಶುಶ್ರೂಷಕಿಯರಾದ ಮಮತಾ, ಅರ್ಪಿತ ಮತ್ತಿತರರಿದ್ದರು.