ಜಿಲ್ಲೆ

ಅಲಕಾ ಕಟ್ಟೆಮನೆ ಅವರಿಂದ ಕಥೆ ಕೇಳೋಣ ಬನ್ನಿ

ಕುವೆಂಪುನಗರದ ಕಲಾ ಸುರುಚಿ ಸಂಸ್ಥೆಯಲ್ಲಿ ಜುಲೈ 15ರಂದು ಸಂಜೆ 4.30ರಿಂದ 5.30ರವರೆಗೆ ಮಕ್ಕಳಿಗಾಗಿ ‘ಕಥೆ ಕೇಳೋಣ ಬನ್ನಿ-784’ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲಕಾ ಕಟ್ಟೆಮನೆ ಮಕ್ಕಳಿಗೆ ಕಥೆ ಹೇಳಲಿದ್ದಾರೆ.

ಚಿತ್ರಗೀತೆಗಳ ಗಾಯನ: ರಾಗಮಾಲಿಕಾ ಸ್ನೇಹ ಬಳಗದಿಂದ ಜು.14ರಂದು ಸಂಜೆ 5 ಗಂಟೆಗೆ ನಗರದ ನಾದಬ್ರಹ್ಮ ಸಭಾ ಮಂಟಪದಲ್ಲಿ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
ಹೊಸ ಪ್ರತಿಭೆಗಳನ್ನು ಅನಾವರಣಗೊಳಿಸಲು ಬಳಗ ಸ್ಥಾಪಿಸಲಾಗಿದೆ. ಕಾರ್ಯಕ್ರಮದಲ್ಲಿ 10 ಕಲಾವಿದರು ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಲಿದ್ದು, ಕನ್ನಡ ಚಲನಚಿತ್ರಗಳ ಹಳೇ ಗೀತೆಗಳನ್ನು ಹಾಡಲಿದ್ದಾರೆ.