ಬೆಂಗಳೂರು ದಕ್ಷಿಣ: ಬನ್ನೇರುಘಟ್ಟ ಮುಖ್ಯರಸ್ತೆಯ ಕೋಳಿ ಫಾರಂ ಗೇಟ್ ಬಳಿ ಮಂಗಳವಾರ ಎರಡು ಬಿಎಂಟಿಸಿ ಬಸ್‌ಗಳು ಓವರ್‌ಟೇಕ್ ಮಾಡುವ ಭರದಲ್ಲಿ ಒಂದಕ್ಕೊಂದು ಡಿಕ್ಕಿಯಾಗಿದ್ದು, ಚಾಲಕರ ನಡುವೆ ಜಟಾಪಟಿ ನಡೆದಿದೆ. ಬನ್ನೇರುಘಟ್ಟದಿಂದ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ಬಸ್‌ಗಳು ಡಿಕ್ಕಿಯಾಗಿ ಚಾಲಕರಿಬ್ಬರು ಪರಸ್ಪರ ಹಲ್ಲೆಗೆ ಮುಂದಾದರು. ರಸ್ತೆ ಮಧ್ಯೆದಲ್ಲಿಯೇ ಬಸ್ ನಿಲ್ಲಿಸಿದ್ದರಿಂದ ಕಿಲೋಮೀಟರ್‌ಗಟ್ಟಲೆ ವಾಹನದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ಸ್ಥಳೀಯರು ಗಲಾಟೆ ನಿಯಂತ್ರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಸ್‌ನಲ್ಲಿದ್ದ ಯಾರಿಗೂ ತೊಂದರೆಗಳಾಗಿಲ್ಲ.