ಶಾಲಾ ವಾಹನ ಹಾಗೂ ಸರಕು ಸಾಗಾಣೆ ಆಟೋರಿಕ್ಷಾದ ನಡುವೆ ಮುಖಾಮುಖಿ ಡಿಕ್ಕಿ. 
ಜಿಲ್ಲೆ

ಶಾಲಾ ವಾಹನ, ಗೂಡ್ಸ್ ನಡುವೆ ಡಿಕ್ಕಿ

ಲೋಕೇಶ್ ಮನು. ಡಿ

ಸುಂಟಿಕೊಪ್ಪ : ಕೆದಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲಾ ವಾಹನ ಹಾಗೂ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಚಾಲಕರು ಪಾರಾಗಿದ್ದಾರೆ.

ಕೆದಕಲ್ ಕಡೆಯಿಂದ ಕೊಪ್ಪ ಕಡೆಗೆ ಬರುತ್ತಿದ್ದ ಖಾಸಗಿ ಶಾಲೆ ಶಾಲಾ ಬಸ್ ಹಾಗೂ ಸುಂಟಿಕೊಪ್ಪ ಮಡಿಕೇರಿ ಕಡೆಗೆ ತೆರಳುತ್ತಿದ್ದ ಗೂಡ್ಸ್ ವಾಹನ ಕೆದಕಲ್ ಬಳಿಯ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.