ಎಸ್.ಬಿ.ಹರಿಕೃಷ್ಣ 
ಜಿಲ್ಲೆ

ಕಾಲೇಜು ರಂಗೋತ್ಸವ ನಾಳೆಯಿಂದ

Kopala - Desk - Eraveni

ಸಿಂಧನೂರು: ನಗರದ ಟೌನ್‌ಹಾಲ್‌ನಲ್ಲಿ ಕರ್ನಾಟಕ ರಂಗಾಯಣ ಕಲಬುರಗಿ, ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕಾಲೇಜು ರಂಗೋತ್ಸವ ನಿಮಿತ್ತ ಜ.10ರಿಂದ ಮೂರು ದಿನಗಳ ಕಾಲ ನಾಟಕ ಪ್ರದರ್ಶನ ನಡೆಯಲಿದೆ ಎಂದು ಕಾಲೇಜು ರಂಗೋತ್ಸವ ಸಂಚಾಲಕ ಎಸ್.ಬಿ.ಹರಿಕೃಷ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕಾರ್ಯಕ್ರಮದ ಉದ್ಘಾಟಕರಾಗಿ ಶಾಸಕ ಹಂಪನಗೌಡ ಬಾದರ್ಲಿ, ಸಾನ್ನಿಧ್ಯ ವಹಿಸುವರು. ಬಂಗಾರಿಕ್ಯಾಂಪ್ ಸಿದ್ದರಾಮೇಶ್ವರ ಶರಣ ಅಧ್ಯಕ್ಷತೆ, ಕರ್ನಾಟಕ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ, ಅತಿಥಿಗಳಾಗಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ರಾಯಚೂರು ವಿಶ್ವವಿದ್ಯಾಲಯ ಕುಲಸಚಿವ ಡಾ.ಶಂಕರ ವಣಕ್ಯಾಳ,

ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಸತ್ಯನಾರಾಯಣ ಶ್ರೇಷ್ಠಿ, ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡ್ರ, ವಿಎಸ್‌ಕೆವಿವಿ ನಾಟಕ ವಿಭಾಗ ಮುಖ್ಯಸ್ಥ ಶಾಂತನಾಯಕ, ಉದ್ಯಮಿ ರಾಜೇಶ ಹಿರೇಮಠ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಕಲಾವಿದ ಅಶೋಕ ಉಮಲೂಟಿ, ತಹಸೀಲ್ದಾರ್ ಅರುಣ್ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಭಾಗವಹಿಸಲಿದ್ದಾರೆ.

ಜ.10ರಂದು ಶಪಥದ ಮಹಾಭಾರತ ಮತ್ತು ಅಶ್ವ ಪರ್ವ, ಜ.11ರಂದು ಒಂದಾನೊಂದು ಊರು, ಕರ್ಮ ನಾಟಕ ಬಾಲಿ, ಜ.12ರಂದು ಸಂಗ್ಯಾಬಾಳ್ಯ, ಊರು ಸುಟ್ಟರು ಹನುಮಪ್ಪ ಹೊರಗ ನಾಟಕ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು. ಕಾಲೇಜು ರಂಗೋತ್ಸವ ಸಂಚಾಲಕ ಸರ್ದಾರ್ ಬಿ., ಉಪನ್ಯಾಸಕರಾದ ವೀರಭದ್ರಪ್ಪ ಸಿದ್ರಾಂಪುರ, ನಾಗರಾಜ ಪತ್ತಾರ, ಸಂಜೀವಕುಮಾರ, ನಾಟಕ ನಿರ್ದೇಶಕ ಮಹೇಶ ಇದ್ದರು.