ಜಿಲ್ಲೆ

ಕಾಲೇಜು ಆವರಣ ಸ್ವಚ್ಛತೆ

ಲಲಾಟಾಕ್ಷ ಎಸ್

ಗೋಣಿಕೊಪ್ಪ: ಬಾಳೆಲೆ ಗ್ರಾಮ ಪಂಚಾಯಿತಿ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು, ಶಾಲಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಬಾಳೆಲೆ ಮುಖ್ಯ ರಸ್ತೆ, ಪದವಿಪೂರ್ವ ಕಾಲೇಜಿನ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಲಾಯಿತು.


ಗ್ರಾಮ ಪಂಚಾಯತಿ ಅಧ್ಯಕ್ಷೆ ಮುಕ್ಕಾಟಿರ ಜಾನಕಿ ಕಾವೇರಪ್ಪ, ಮಾಜಿ ಅಧ್ಯಕ್ಷ ಪೊಡಮಾಡ ಸುಕೇಶ್ ಭೀಮಯ್ಯ, ಸದಸ್ಯ ಅದೇಂಗಡ ವಿನು ಉತ್ತಪ್ಪ, ಪ್ರಾಂಶುಪಾಲ ಯನ್.ಕೆ ಪ್ರಭು, ಪ್ರೌಢಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್, ಪ್ರಮುಖರಾದ ಅಡ್ಡೇಂಗಡ ಅರುಣ್, ಸಜನ್, ರಾಖಿ, ಅಜಯ್, ಕಾವೇರಮ್ಮ, ಶೌರ್ಯ, ಪಡಿಞರಂಡ ಪ್ರಭು ಕುಮಾರ್, ಲಕ್ಷ್ಮ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಸುಜಾತಾ ವಿಜಯನಾಧನ್ ಹಾಗೂ ಸದಸ್ಯರು ಹಾಜರಿದ್ದರು.