ಕಲಾದಗಿ: ಅಲ್ಪ ಭೂಮಿಯಲ್ಲೇ ದಾಳಿಂಬೆ ಹಾಗೂ ಮೆಣಸಿನಕಾಯಿ ಸಲನ್ನು ಉತ್ತಮವಾಗಿ ತೆಗೆದಿರುವ ಗ್ರಾಮದ ಪ್ರಗತಿಪರ ರೈತ ಹಾಗೂ ಗ್ರಾಪಂ ಉಪಾಧ್ಯಕ್ಷ ಪಕೀರಪ್ಪ ಮಾದರ ಅವರ ತೋಟಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮದ ಸಂಶಿ ಕ್ರಾಸ್‌ಬಳಿಯ ಪಕೀರಪ್ಪ ಮಾದರ ಅವರ ಮೆಣಸಿನಕಾಯಿ ಬೆಳೆ ಬೆಳೆದ ಜಮೀನಿಗೆ ಹಾಗೂ ಗ್ರಾಮದ ಹಣ್ಣು ಬೆಳೆಗಾರರ ಸಂಘದ ಬಳಿಯ ದಾಳಿಂಬೆ ತೋಟಕ್ಕೆ ಬುಧವಾರಭೇಟಿ ನೀಡಿದರು.
ಜಮೀನಿನಲ್ಲಿ ತಿರುಗಾಡಿ ಬೆಳೆದ ಫಸಲನ್ನು ವೀಕ್ಷಿಸಿದ ಅವರು, ರೈತ ಪಕೀರಪ್ಪ ಅವರಿಂದ ಸಮೃದ್ಧ ಬೆಳೆ ಬೆಳೆಯಲು ಕೈಗೊಂಡ ಕ್ರಮ, ಮಾರುಕಟ್ಟೆ ಕುರಿತು ಮಾಹಿತಿ ಪಡೆದುಕೊಂಡರು.
ಕೃಷಿ ತೋಟಗಾರಿಕೆ ಇಲಾಖೆಯಿಂದ ಮಾಹಿತಿಗನುಗುಣವಾಗಿ ಹವಾಮಾನಕ್ಕೆ ತಕ್ಕಂತೆ ಬೆಳೆ ಸಂರಕ್ಷಿಸಿದರೆ, ಆಧುನಿಕ ಕೃಷಿ ಪದ್ಧತಿಯೊಂದಿಗೆ ಮನಸ್ಸಿಟ್ಟು ದುಡಿದರೆ ಉತ್ತಮ ಬೆಳೆ ಬೆಳೆಯಲು ಸಾಧ್ಯ ಎಂಬುದಕ್ಕೆ ಪಕೀರಪ್ಪ ಮಾದರ ಅವರೇ ಸಾಕ್ಷಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ, ಸಹಾಯಕ ತೋಟಗಾರಿಕೆ ಅಧಿಕಾರಿ ಮಹಾಂತೇಶ ರಾಜೊಳ್ಳಿ, ಗ್ರಾಪಂ ಸದಸ್ಯರಾದ ಶ್ಯಾಮ ಕಾಳೆ, ಎಂ.ಎ. ತೇಲಿ ಇತರರಿದ್ದರು.