ಜಿಲ್ಲೆ

ಸ್ವಚ್ಛತೆ ಮಾಡಿ ಜನರಿಗೆ ಅರಿವು ಮೂಡಿಸಿದ ಜಿಲ್ಲಾಧಿಕಾರಿ

ಚಿಕ್ಕಬಳ್ಳಾಪುರ ಡೆಸ್ಕ್

ಕಸ ತೆಗೆದ ಪಿ.ಎನ್​.ರವೀಂದ್ರ > ನಗರ ಸಂಚಾರದಲ್ಲಿ ಒತ್ತುವರಿಗೆ ಸೂಚನೆ > ಶಾಸಕ ರವಿಕುಮಾರ್​ ಸಾಥ್​

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ
ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಸ್ವಚ್ಛ ಹಾಗೂ ಹಸಿರುಮಯ ಮಾಡಲು ಸಂಕಲ್ಪ ಮಾಡಿರುವ ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ, ಮಂಗಳವಾರ ಬೆಳ್ಳಂಬೆಳಗ್ಗೆ ರೇಷ್ಮೆ ನಗರಿ ಶಿಡ್ಲಘಟ್ಟಕ್ಕೆ ಭೇಟಿ ನೀಡಿ ಸ್ವಚ್ಛತಾ ಕಾರ್ಯ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್​ ಸೂಚನೆ ಹಿನ್ನೆಲೆ ಜಿಲ್ಲೆಯನ್ನು ಕ್ಲೀನ್​ ಆ್ಯಂಡ್​ ಗ್ರೀನ್​ ಮಾಡಲು ಕಳೆದ ಮೂರು ವಾರಗಳಿಂದ ಕಾರ್ಯಪ್ರವೃತ್ತರಾಗಿರುವ ಜಿಲ್ಲಾಧಿಕಾರಿಗಳು, ಪ್ರತಿ ಮಂಗಳವಾರ ಒಂದೊಂದು ನಗರಕ್ಕೆ ಭೇಟಿ ನೀಡಿ ಸ್ವಚ್ಛತಾ ಅಭಿಯಾನ ಕೈಗೊಳ್ಳುತ್ತಿದ್ದಾರೆ. ಆ ಮೂಲಕ ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಜತೆಗೆ ಜಿಲ್ಲೆಯನ್ನು ಪ್ಲಾಸ್ಟಿಕ್​ ಮುಕ್ತ ಮಾಡಲು ಸಂಕಲ್ಪ ಮಾಡಿದ್ದಾರೆ.
ಶಿಡ್ಲಘಟ್ಟ ನಗರಸಭೆ ಅಧ್ಯೆ ಸುಮಿತ್ರಾ ರಮೇಶ್​, ಪೌರಾಯುಕ್ತ ಆರ್​ ಶ್ರೀಕಾಂತ್​, ಶಿಡ್ಲಘಟ್ಟ ತಾಪಂ ಮಾಜಿ ಅಧ್ಯಕ್ಷ ಲಕ್ಷಿ$್ಮನಾರಾಯಣರೆಡ್ಡಿ, ಜೆಡಿಎಸ್​ ಮುಖಂಡರಾದ ತಾದೂರು ರಘು, ನಂದ್​ಕಿಶನ್​, ಬಿ.ನಾರಾಯಣಸ್ವಾಮಿ, ಹನುಮಂತಪುರ ವಿಜಯಕುಮಾರ್​ ಇತರರು ಇದ್ದರು.

ಪ್ರತ್ಯೇಕ ಕಸ ಸಂಗ್ರಹಕ್ಕೆ ಮನವಿ
ನಗರದ ಸಾರಿಗೆ ಬಸ್​ ನಿಲ್ದಾಣದಿಂದ ಕೋಟೆ ವೃತ್ತದವರೆಗೆ ಸ್ವತ@ ಜಿಲ್ಲಾಧಿಕಾರಿಯವರೇ ಸ್ವಚ್ಛತೆ ಕಾರ್ಯ ನಿರ್ವಹಿಸಿದರು. ಸ್ಥಳಿಯ ಶಾಸಕ ಬಿ.ಎನ್​.ರವಿಕುಮಾರ್​ ಸಾಥ್​ ನೀಡಿದರು. ನಗರದ ಮುಖ್ಯ ರಸ್ತೆಯಾಗಿರುವ ಟಿ.ಬಿ ರಸ್ತೆಯ ಎಡ ಮತ್ತು ಬಲಭಾಗದಲ್ಲಿ ಪ್ರತಿ ಮನೆ ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ಒಣ ಮತ್ತು ಹಸಿ ಕಸವನ್ನು ಸಂಗ್ರಹಿಸಿ ನಗರ ಸ್ವಚ್ಛ ಹಾಗೂ ಸುಂದರವಾಗಿಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ುಟ್​ಪಾತ್​ ಒತ್ತುವರಿ ತೆರವು:
ನಗರ ದರ್ಶನ ವೇಳೆ ಕೆಲವರು ಅಕ್ರಮವಾಗಿ ಫುಟ್​ಪಾತ್​ ಒತ್ತುವರಿ ಮಾಡಿಕೊಂಡಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ಸ್ವತ@ ಅವರೇ ತೆರವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಿದರಲ್ಲದೆ, ಮಂಗಳವಾರ ಸಂಜೆ ಒಳಗೆ ಫುಟ್​ಪಾತ್​ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಪೌರಾಯುಕ್ತ ಆರ್​.ಶ್ರೀಕಾಂತ್​ ಅವರಿಗೆ ತಾಕೀತು ಮಾಡಿದರು. ನಗರದ ಕೋಟೆ ವೃತ್ತದಲ್ಲಿ ಸರ್ಕಾರಿ ಶಾಲೆ ಮುಂದೆ ಕಸ ಶೇಖರಣೆ ಮಾಡಿಕೊಂಡಿರುವುದನ್ನು ಕಂಡು ಅಸಮಾಧಾನಗೊಂಡ ಜಿಲ್ಲಾಧಿಕಾರಿ, ಶಾಲೆಯ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಆಯಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಬೇಕು ಎಂದು ತಹಸೀಲ್ದಾರ್​ಗೆ ಸೂಚಿಸಿದರು.

ಅನೈರ್ಮಲ್ಯಕ್ಕೆ ಸಿಟ್ಟಾದರು:
ಚಹಾ ಅಂಗಡಿ ಸುತ್ತ ನೈರ್ಮಲ್ಯ ಹದಗೆಟ್ಟಿರುವುದನ್ನು ನೋಡಿ ಹೊಟೇಲ್​ ಮಾಲೀಕರಿಗೆ ತರಾಟೆಗೆ ತೆಗೆದುಕೊಂಡರು. ಮಳೆಯಿಂದ ಈ ರೀತಿಯಾಗಿದೆ ಎಂಬ ಅಂಗಡಿ ಮಾಲೀಕನ ರ್ನಿಲಕ್ಷ$್ಯದ ಉತ್ತರಕ್ಕೆ ಸಿಟ್ಟಾದ ಡಿಸಿ, ತಕ್ಷಣವೇ ಹೊಟೇಲ್​ ಮಾಲೀಕನಿಗೆ ನೋಟಿಸ್​ ನೀಡಿ ಬಂದ್​ ಮಾಡಲು ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು. ಎರಡನೇ ಟಿಎಂಸಿ ಬಡಾವಣೆ, ಎರಡನೇ ಕಾರ್ಮಿಕ ನಗರ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿ ಅಮೃತ ನಗರ ಯೋಜನೆ ಅಡಿ ನಗರದಲ್ಲಿ ಅಗತ್ಯವಾಗಿ ಬೇಕಾಗಿರುವ ರಸ್ತೆ ಮತ್ತು ಚರಂಡಿ ನಿಮಾರ್ಣ ಮಾಡಲು ನಗರಸಭೆಯಲ್ಲಿ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿ, ತಕ್ಷಣವೇ ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಕಳೆದ ವರ್ಷ ಮಳೆಯಿಂದ ಹಾನಿಯಾಗಿರುವ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗಾಗಿ ವಿಶೇಷ ನೆರವು ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕೋಟ್​))))

ಕ್ಷೇತ್ರದ ಜನಸಮಾನ್ಯರು ನೆಮ್ಮದಿಯಾಗಿ ಜೀವನ ಸಾಗಿಸಬೇಕೆನ್ನುವುದು ನಮ್ಮಅಭಿಲಾಷೆ. ಈ ನಿಟ್ಟಿನಲ್ಲಿ ಜನತೆಗೆ ಅಗತ್ಯವಿರುವ ಮೂಲ ಸೌಕರ್ಯಗಳ ಜತೆ ಸ್ವಚ್ಛತೆಯ ವಾತಾವರಣ ನಿರ್ಮಿಸುವುದು ನಮ್ಮ ಗುರಿಯಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ.

ಬಿ.ಎನ್​.ರವಿಕುಮಾರ್​, ಶಾಸಕ