ಮಂಗಳೂರು : ಕಾನೂನು ಪೋಷಕತ್ವದ ಬಗ್ಗೆ 10ನೇ ಸ್ಥಳೀಯ ಮಟ್ಟದ ಸಭೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು.
ಸೇವಾಭಾರತಿ ಸಂಸ್ಥೆಯ ಸ್ವಯಂ ಸೇವಕ ಗಣೇಶ್ ಪೈ ಅವರು ಕಾನೂನು ಪೋಷಕತ್ವ ಮತ್ತು ನಿರಾಮಯ ಆರೋಗ್ಯ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು. ನಿರಾಮಯ ಕಾರ್ಡ್ ಪಡೆಯದೇ ಇರುವ ಯುಡಿಐಡಿ ಕಾರ್ಡ್ ಆಗದಿರುವ ಅಂಗವಿಕಲರಿಗೆ ಕೂಡಲೇ ಕಾರ್ಡ್ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭಕಾನೂನು ಪೋಷಕತ್ವ ಪ್ರಮಾಣ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಜಿಲ್ಲಾ ವೈದ್ಯಾಧಿಕಾರಿ ಸದಾಶಿವ ಶ್ಯಾನ್‌ಭಾಗ್, ಜಿಲ್ಲಾ ರಿಜಿಸ್ಟರ್ ಆಫೀಸರ್ ಪ್ರೇಮಾ, ವಕೀಲರಾದ ಸುಧಾಕರ ಜೋಷಿ, ಕೆ. ಪೃಥ್ವಿರಾಜ್ ರೈ, ಸೇವಾ ಭಾರತಿಯ ವಿನೋದ್ ಶೆಣೈ, ನರಸಿಂಹರಾಜು ಉಪಸ್ಥಿತರಿದ್ದರು. ಜಿಲ್ಲಾ ವಿಕಲ ಚೇತನಾಧಿಕಾರಿ ಗೋಪಾಲಕೃಷ್ಣ ಸ್ವಾಗತಿಸಿ, ವಂದಿಸಿದರು.