ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಕಳವಾಸೆ ರವಿ ಹಾಗೂ ಕೋಮಲಾ ಅವರು ನೀಡಿದ ಐದು ಲಕ್ಷ ರೂ.ಗಳ ದೇಣಿಗೆ ಚೆಕ್ ಅನ್ನು ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಸ್ವೀಕರಿಸಿದರು. ಲಕ್ಷö್ಮಣ ಗೌಡ, ಎಂ.ಸಿ.ಪ್ರಕಾಶ್, ಲಕ್ಷಿö್ಮÃ, ಬಿ.ಎಲ್.ಸಂದೀಪ್ ಮತ್ತಿತರರಿದ್ದರು. 
ಜಿಲ್ಲೆ

ಒಕ್ಕಲಿಗ ಜನಾಂಗದ ಅಭಿವೃದ್ಧಿಗೆ ದೇಣಿಗೆ ಸಂಗ್ರಹ

ಚಿಕ್ಕಮಗಳೂರು: ಒಕ್ಕಲಿಗ ಜನಾಂಗದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ವಿದ್ಯಾರ್ಥಿ ವೇತನ ನೀಡಲು ಅನುಕೂಲವಾಗುವಂತೆ ಸಮಾಜದ ಮನೆಮನೆಗೆ ಸಂಪರ್ಕ ಮಾಡಿ ದೇಣಿಗೆ ಸಂಗ್ರಹಿಸುವ ಅಭಿಯಾನಕ್ಕೆ ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.

ಸಮಾಜದ ಅಭಿವೃದ್ಧಿಗಾಗಿ ಒಕ್ಕಲಿಗರ ಸಂಘದ ನಿರ್ದೇಶಕ ಕಳವಾಸೆ ರವಿ, ಕೋಮಲಾ ನೀಡಿದ ೫ ಲಕ್ಷ ರೂ.ಗಳ ಚೆಕ್ ಸ್ವೀಕರಿಸಿ ಮಾತನಾಡಿದ ಅವರು, ಕಳವಾಸೆ ರವಿ ದಂಪತಿಗಳು ೫ ಲಕ್ಷ ರೂ. ದೇಣಿಗೆ ನೀಡುವ ಮೂಲಕ ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಐ.ಡಿ ಮೋಹನ್ ೫ ಲಕ್ಷ ರೂಗಳ ದೇಣಿಗೆ ನೀಡಿದ್ದು, ಸಮಾಜದ ಇತರೆ ೫ ಜನ ತಲಾ ೨೫ ಸಾವಿರ ರೂ.ಗಳಂತೆ ದೇಣಿಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ದಾನಿಗಳಿಂದ ದೇಣಿಗೆ ಸಂಗ್ರಹಿಸಿ ವಾಣಿಜ್ಯ ಮಳಿಗೆ ಮತ್ತು ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಸಂಘದ ಚಟುವಟಿಕೆಗಳಿಗೆ ಬಳಸಲಾಗುವುದು. ಇದಕ್ಕೆ ಸಹಕರಿಸುತ್ತಿರುವ ಸಮಾಜದ ದಾನಿಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ದೇಣಿಗೆ ನೀಡಿದ ಕಳವಾಸೆ ರವಿ ಮಾತನಾಡಿ, ಸರ್ವ ಜನಾಂಗದ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಅನುಕೂಲವಾಗುವಂತೆ ಈ ವಂತಿಕೆಯನ್ನು ನೀಡಲಾಗಿದೆ. ಒಕ್ಕಲಿಗರು ತಲತಲಾಂತರದಿAದ ಕೃಷಿಕರಾಗಿದ್ದು, ಪರದೇಶಪ್ಪನ ಮಠ, ಕವಿಕಲ್ ಮಠ ಮುಂತಾದವುಗಳಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದಾನ-ಧರ್ಮ ಮಾಡುತ್ತಿz್ದೆÃವೆ. ನಮ್ಮ ಹಿರಿಯರಿಂದ ಪ್ರಭಾವಿತರಾಗಿ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುತ್ತಿz್ದÉÃನೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಲಕ್ಷö್ಮಣ್ ಗೌಡ, ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ನಿರ್ದೇಶಕರಾದ ಬಿ.ಎಲ್ ಸಂದೀಪ್, ಕೆ.ಎಸ್.ನಾರಾಯಣ ಗೌಡ, ಕೆ.ಯು.ರತೀಶ್ ಕುಮಾರ್, ಕೆ.ಕೆ.ಮನುಕುಮಾರ್, ಎಂ.ಬಿ.ಆನAದ್, ಬಿ.ಎಸ್.ಚಂದ್ರಪ್ಪ, ಎಂ.ಕೆ.ದಿನೇಶ್, ಎಚ್.ಬಿ.ಲಕ್ಷಿö್ಮÃ, ಬಿ.ಸುಜಿತ್, ಕೆ.ಕೆ.ವೆಂಕಟೇಶ್, ಎಚ್.ಎನ್.ಶ್ರೀಧರ್, ಟಿ.ಡಿ.ಮಲ್ಲೇಶ್, ಜಿ.ಎಚ್.ದಿನೇಶ್, ಕೆ.ಪಿ.ಪೃಥ್ವಿರಾಜ್, ಎಚ್.ಎಂ.ಸತೀಶ್, ಎಂ.ಎಚ್.ರಾಮಚAದ್ರ, ಕೆ.ಎಸ್.ಜಗನಾಥ್, ಕೆ.ಎಸ್.ರಮೇಶ್, ಎಸ್.ಆರ್.ಚೇತನ್, ಐ.ಡಿ.ಮೋಹನ್ ಕುಮಾರ್, ಎಚ್.ಆರ್.ಹೇಮಾವತಿ, ಕೆ.ಎ.ರಾಜೇಗೌಡ, ಐ.ಎಸ್.ಉಮೇಶ್ ಚಂದ್ರ, ಎ.ಪೂಣೇಶ್ ಮತ್ತಿತರರು ಉಪಸ್ಥಿತರಿದ್ದರು.