ಆನಂದಪುರದ ಬ್ರಹ್ಮಪುರಿ ಆಂಜನೇಯ ಸ್ವಾಮಿ ದೇವಾಲಯ ಟ್ರಸ್ಟಿನಿಂದ ಹೊಳೆಹೊನ್ನೂರು ಉತ್ತರಾದಿ ಮಠಾಽÃಶರಿಗೆ ಮೆರವಣಿಗೆ ಮೂಲಕ ಹೊರೆಕಾಣಿಕೆ ಸಂಗ್ರಹಿಸಲಾಯಿತು. 
ಜಿಲ್ಲೆ

ಉತ್ತರಾದಿ ಮಠಾಽÃಶರಿಗೆ ಹೊರೆಕಾಣಿಕೆ ಸಂಗ್ರಹ

Shivamogga - Desk - Megha MS

ಆನAದಪುರ: ಇಲ್ಲಿನ ರಂಗನಾಥ ದೇವಾಲಯದ ಬಳಿ ಇರುವ ಶ್ರೀಬ್ರಹ್ಮಪುರಿ ಆಂಜನೇಯ ಸ್ವಾಮಿ ದೇವಾಲಯ ಟ್ರಸ್ಟ್ ಹಾಗೂ ಸಾರ್ವಜನಿಕರು ಸೇರಿ ಸೋಮವಾರ ಉತ್ತರಾದಿ ಮಠಾಽÃಶರಿಗೆ ಸಮರ್ಪಿಸುವ ಹೊರೆ ಕಾಣಿಕೆಯ ಸುವಸ್ತುಗಳ ಮೆರವಣಿಗೆ ನಡೆಸಿದರು.

ಉತ್ತರಾದಿ ಮಠಾಽÃಶರಾದ ಸತ್ಯಾತ್ಮ ಶ್ರೀಗಳು ಹೊಳೆಹೊನ್ನೂರಿನಲ್ಲಿ ಈ ವರ್ಷದ ಚಾತುರ್ಮಾಸ್ಯ ವ್ರತ ದೀಕ್ಷೆಯಲ್ಲಿ ತೊಡಗಿಕೊಂಡಿದ್ದಾರೆ. ಶ್ರೀಗಳ ಚಾತುರ್ಮಾಸ್ಯ ವ್ರತದ ನಿಮಿತ್ತ ನಿತ್ಯವೂ ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಸಾರ್ವಜನಿಕರಿಂದ ಸಂಗ್ರಹವಾದ ಅಕ್ಕಿ, ಕಾಯಿ, ಬೆಲ್ಲ ಇತ್ಯಾದಿ ಸುವಸ್ತುಗಳನ್ನು ವಿಶೇಷ ವಾಹನದಲ್ಲಿಟ್ಟು ಭವ್ಯ ಮೆರವಣಿಗೆ ಮೂಲಕ ಸಾಗಿಸಲಾಯಿತು. ಬ್ರಹ್ಮಪುರಿ ಆಂಜನೇಯ ಸ್ವಾಮಿ ದೇವಾಲಯದಿಂದ ಪ್ರಮುಖ ಬೀದಿ ಮತ್ತು ರಾಷ್ಟಿçÃಯ ಹೆದ್ದಾರಿಯಲ್ಲಿ ಊರಿನ ಗಡಿಯವರೆಗೆ ಮೆರವಣಿಗೆ ನಡೆಯಿತು. ನಂತರ ಚೋರಡಿ, ಕುಂಸಿ, ಆಯನೂರು ಮತ್ತು ಶಿವಮೊಗ್ಗದ ಮೂಲಕ ಭಕ್ತರಿಂದ ಹೊರೆಕಾಣಿಕೆ ಸ್ವೀಕರಿಸುತ್ತಾ ಹೊಳೆಹೊನ್ನೂರಿನವರೆಗೂ ಹೊರೆಕಾಣಿಕೆ ವಾಹನ ಸಂಚಾರ ನಡೆಸಲಾಯಿತು.