ಜಿಲ್ಲೆ

ದೇಣಿಗೆ ಸಂಗ್ರಹಿಸಿ ರಸ್ತೆ ಕಾಂಕ್ರೀಟೀಕರಣ : ಐವರ್ನಾಡಿನ ದೇರಾಜೆ ಗೆಳೆಯರ ಬಳಗದ ಕಾರ್ಯ

ಸೌಮ್ಯ ಆರ್

ಸುಳ್ಯ: ಐವರ್ನಾಡಿನ ದೇರಾಜೆ ಗೆಳೆಯರ ಬಳಗದ ಸದಸ್ಯರು ದೇಣಿಗೆ ಮೂಲಕ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರು ರಸ್ತೆ ಹಲವು ವರ್ಷಗಳಿಂದ ಹೊಂಡಗುಂಡಿಗಳಿಂದ ಕೂಡಿದ್ದು ಭಕ್ತರಿಗೆ ತೊಂದರೆಯಾಗಿತ್ತು. ಈ ಬಗ್ಗೆ ಜನಪ್ರತಿನಿಧಿಗಳಿಗೆ, ಸ್ಥಳೀಯ ಆಡಳಿತಕ್ಕೆ, ಸರ್ಕಾರಕ್ಕೆ ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಗೆಳೆಯರ ಬಳಗದ ನೇತೃತ್ವದಲ್ಲಿ ದೇಣಿಗೆ ಸಂಗ್ರಹಿಸಿದ 88 ಸಾವಿರ ರೂ. ವೆಚ್ಚದಲ್ಲಿ 23 ಮೀ. ಉದ್ದ, 3.5 ಮೀ. ಅಗಲದ 6 ಇಂಚು ದಪ್ಪ ಕಾಂಕ್ರಿಟೀಕರಣ ಮಾಡಲಾಗಿದೆ. ಸಂಘದ ಸದಸ್ಯರೇ ಸೇರಿ ಕೆಲಸ ಮಾಡಿದ್ದಾರೆ.

ದೇವಸ್ಥಾನದ ಅರ್ಚಕ ರಾಮಚಂದ್ರ ಭಟ್ ರಸ್ತೆ ಉದ್ಘಾಟಿಸಿದರು. ಲಕ್ಷ್ಮೀನಾರಾಯಣ ಕಣಿಪ್ಪಿಲ, ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಮಡ್ತಿಲ, ದಾಸಪ್ಪಗೌಡ ಕೊಡ್ತೀಲು, ನವೀನ್ ಚಾತುಬಾಯಿ, ದೇವಿದಾಸ ಕತ್ಲಡ್ಕ, ಜನಾರ್ದನ ಕೊಪ್ಪಳ, ವಸಿಷ್ಟ ಭಟ್, ಚಂದ್ರ ಕೋಲ್ಚಾರ್, ಪದ್ಮಾ ಕೋಲ್ಚಾರ್, ಗಣೇಶ್, ನಿಖಿಲ್, ಜಗದೀಶ ಕೋಲ್ಚಾರು, ದೇರಾಜೆ ಗೆಳೆಯರ ಬಳಗದ ಎಲ್ಲ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಗೆಳೆಯರ ಬಳಗದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.