ರಕ್ತದಾನ ಶಿಬಿರ ಪೋಸ್ಟ್‌ರ್‌ಅನ್ನು ಬೆಂಗಳೂರಿನಲ್ಲಿ ನಿವೃತ್ತ ಪೊಲೀಸ್ ಕಮಿಷನರ್, ರೆಡ್ ಕ್ರಾಸ್ ರಾಜ್ಯ ಉಪಾಧ್ಯಕ್ಷ ಎನ್.ಭಾಸ್ಕರ್‌ರಾವ್ ಬಿಡುಗಡೆ ಮಾಡಿದರು. ಪೂರ್ಣಿಮಾ ಶ್ರೀಕಾಂತ್, ಆದರ್ಶ್, ಪರಮೇಶ್ವರಯ್ಯ, ಶಂಕರ್, ನವೀನ್‌ಕುಮಾರ್, ಗಣೇಶ್, ಶಿವಪ್ರಸಾದ್, ಮಹೇಶ್ ಇದ್ದರು. 
ಜಿಲ್ಲೆ

ದಾಖಲೆ ಪ್ರಮಾಣದಲ್ಲಿ ರಕ್ತ ಸಂಗ್ರಹಿಸಿ

ಮಾದೇಶ್ ತಿ.ನರಸೀಪುರ

ಮದ್ದೂರು: ರಕ್ತದಾನ ಮಾಡುವುದರಿಂದ ಸಂಕಷ್ಟಲ್ಲಿರುವ ಜೀವಗಳನ್ನು ಉಳಿಸಬಹುದಾಗಿದೆ ಎಂದು ನಿವೃತ್ತ ಪೊಲೀಸ್ ಕಮಿಷನರ್ ಹಾಗೂ ರೆಡ್ ಕ್ರಾಸ್ ರಾಜ್ಯ ಉಪಾಧ್ಯಕ್ಷ ಎನ್. ಭಾಸ್ಕರ್ ರಾವ್ ಹೇಳಿದರು.

ವಿವಿಧ ಸಂಘಟನೆಗಳ ವತಿಯಿಂದ ದೇಶದಲ್ಲೇ ಮೊದಲ ಬಾರಿಗೆ ಭೂಮಿ ಪುತ್ರ ರೈತನ ಗೌರವಾರ್ಥವಾಗಿ ಹಾಗೂ 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆ.15ರಂದು ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ರೈತ ರಕ್ತದಾನ ಶಿಬಿರದ ಪೋಸ್ಟರ್ ಅನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ರಕ್ತದಾನ ಮಹಾದಾನವಾಗಿದ್ದು, ಆರೋಗ್ಯವಂತರು ನಿಗದಿತವಾಗಿ ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯ ವೃದ್ಧಿಯಾಗುವ ಜತೆಗೆ ಸಂಕಷ್ಟದಲ್ಲಿರುವ ಜೀವಗಳಿಗೆ ಅನುಕೂಲವಾಗಲಿದೆ. ಉತ್ಸಾಹಿ ಯುವಕರು ಆಸಕ್ತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಪ್ರಶಂಸನೀಯ ಸಂಗತಿಯಾಗಿದ್ದು, ದಾಖಲೆ ಪ್ರಮಾಣದಲ್ಲಿ ರಕ್ತ ಸಂಗ್ರಹ ಮಾಡಲಿ ಎಂದು ಹಾರೈಸಿದರು.

ವಕೀಲರಾದ ಪೂರ್ಣಿಮಾ ಶ್ರೀಕಾಂತ್, ಆದರ್ಶ್, ಪರಮೇಶ್ವರಯ್ಯ, ಶಂಕರ್, ಮುಖಂಡರಾದ ನವೀನ್‌ಕುಮಾರ್, ಗಣೇಶ್, ಶಿವಪ್ರಸಾದ್, ಮಹೇಶ್ ಇದ್ದರು.