ರಾಯಚೂರು ಫೈಲೇರಿಯಾ ರೋಗದ ಪ್ರಸರಣಾ ಮೌಲ್ಯಮಾಪನಾ ಸಮೀಕ್ಷೆಗೆ ತಾಲೂಕಿನ ಎಲ್ಲ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳು ಸಹಕಾರಿಸಬೇಕೆಂದು ತಹಶೀಲ್ದಾರ್ ಸುರೇಶ ವರ್ಮ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶನಿವಾರ ವಿಬಿಡಿಸಿ ಕಾರ್ಯಕ್ರಮದ ಫೈಲೇರಿಯಾ ರೋಗದ ಪ್ರಸರಣಾ ಮೌಲ್ಯಮಾಪನಾ ಸಮೀಕ್ಷೆಯ ತಾಲೂಕು ಮಟ್ಟದ ಟಾಸ್ಕ ಫೋರ್ಸ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನ ಒಟ್ಟು 37 ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳು ಹಾಗೂ ಹೆಚ್ಚುವರಿಯಾಗಿ ಆಯ್ಕೆಯಾದ 15 ಶಾಲೆಗಳಲ್ಲಿನ ಒಂದು ಹಾಗೂ ಎರಡನೇ ತರಗತಿಯ ವಿಧ್ಯಾರ್ಥಿಗಳಿಗೆ ಇಎಲ್‌ಎಫ್ ರೋಗದ ಪ್ರಸರಣಾ ಮೌಲ್ಯಮಾಪನಾ ಸಮೀಕ್ಷೆ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಶಾಲಾ ಮುಖ್ಯಗುರುಗಳು ಹಾಗೂ ಶಾಲಾ ವ್ಯವಸ್ಥಾಪಕರು ಇಎಲ್‌ಎಫ್ ರೋಗದ ಪ್ರಸರಣಾ ಮೌಲ್ಯಮಾಪನಾ ಸಮೀಕ್ಷೆ ಕೈಗೊಂಡು ಆರೋಗ್ಯ ಇಲಾಖೆಗೆ ಸಹಕಾರ ನೀಡುವಂತೆ ಸೂಚಿಸಿದರು.
ತಾಲೂಕಿನ ಯಾವುದೇ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳು ನಿರಾಕರಿಸಿದಲ್ಲಿ ಅಂತಹ ಶಾಲೆಯ ನೋಂದಣಿಯನ್ನು ರದ್ದುಪಡಿಸುವುದಾಗಿ ಸಭೆಯಲ್ಲಿ ಎಚ್ಚರಿಸಿದರು.
ಈ ತಿಂಗಳಲ್ಲಿ ಪರೀಕ್ಷೆ ಮುಗಿದು ದಸರಾ ರಜೆಗೆ ಮಕ್ಕಳು ತೆರಳುವ ಮುಂಚಿತವಾಗಿಯೆ ಈ ಇಎಲ್‌ಎಫ್ ರೋಗದ ಪ್ರಸರಣಾ ಮೌಲ್ಯಮಾಪನ ಸಮೀಕ್ಷೆಯನ್ನು ಎಫ್‌ಟಿಎಸ್ ಕೀಟ್ಸ್ ಮೂಲಕ ಪರೀಕ್ಷಾ ಕಾರ್ಯಪೂರ್ಣಗೊಳಿಸಲು ಆರೋಗ್ಯ ಇಲಾಖೆಯು ಕ್ರಿಯಾ ಯೋಜನೆಯನ್ನು ತಯಾರಿಸಬೇಕು ಎಂದರು.
ಈ ಸಂದರ್ಭದಲ್ಲಿ ಟಿಎಚ್‌ಓ ಡಾ.ಪ್ರಜ್ವಲ್,ಡಾ.ವೆಂಕಟೇಶ,ತಾಲೂಕಾ ವಿಬಿಡಿ ಮೇಲ್ವಿಚಾರಕಿ ಸಂಧ್ಯಾ ನಾಯಕ್ ಸೇರಿ ಅನೇಕರು ಇದ್ದರು.