ದೇವದುರ್ಗದಲ್ಲಿ ಆಯೋಜಿಸಿದ್ದ 100 ದಿನಗಳ ಕ್ಷಯಮುಕ್ತ ಅಭಿಯಾನದಲ್ಲಿ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರ ಪ್ರದರ್ಶಿಸಲಾಯಿತು. ಟಿಎಚ್‌ಇಒ ಲಕ್ಷ್ಮೀ ಮುಂಡಾಸ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗೀತಾ, ಮಲೇರಿಯಾ ಮೇಲ್ವಿಚಾರಕ ಓಂಕಾರ ಜಂತೇಕಾರ್, ಆರೋಗ್ಯ ಇಲಾಖೆ ಸಿಬ್ಬಂದಿ ರಾಮಕೃಷ್ಣ, ಸುನೀಲ್, ಸಂದೀಪ್, ಶಿಕ್ಷಕರಾದ ಅಂಬಿಕಾ, ಭಾಗ್ಯ, ಶಶಿಕಲಾ, ವಿಜಯಲಕ್ಷ್ಮಿ ಇದ್ದರು. 
ಜಿಲ್ಲೆ

ಕ್ಷಯ ಪತ್ತೆ ಅಭಿಯಾನಕ್ಕೆ ಸಹಕರಿಸಿ

ನರೇಶ್ ಕುಮಾರ್

ದೇವದುರ್ಗ: ಕ್ಷಯ ರೋಗದ ಬಗ್ಗೆ ಜನರು ಉದಾಸೀನ ತೋರದೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಟಿಎಚ್‌ಇಒ ಲಕ್ಷ್ಮೀ ಮುಂಡಾಸ್ ಹೇಳಿದರು.

ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಆಯೋಜಿಸಿದ್ದ 100 ದಿನಗಳ ಕ್ಷಯ ರೋಗ ಜಾಗೃತಿ ಹಾಗೂ ಟಿಬಿಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಕ್ಷಯಮುಕ್ತ ಭಾರತ ಮಾಡಲು ಕೇಂದ್ರ ಸರ್ಕಾರ ವಿವಿಧ ಕಾಯಕ್ರಮ ರೂಪಿಸಿದೆ. 100 ದಿನಗಳ ಕ್ಷಯರೋಗ ಪತ್ತೆ ಹಾಗೂ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಅಂಗನವಾಡಿ, ಆಶಾ ಕಾಯಕರ್ತೆಯರು ಜತೆ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಹಳ್ಳಿಗೆ ಭೇಟಿ ನೀಡಿ ಶಿಬಿರ ನಡೆಸಲಿದೆ.

ಜನರು ಸಕ್ರಿಯವಾಗಿ ಭಾಗವಹಿಸಿ ತಪಾಸಣೆ ಮಾಡಿಸಿಕೊಳ್ಳಬೇಕು. ಎರಡು ವಾರಕ್ಕಿಂತ ಹೆಚ್ಚು ದಿನ ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಹಸಿವು ಆಗದೇ ಇರುವುದು, ನಿದ್ರೆ ಬಾರದಿರುವುದು ಕ್ಷಯರೋಗದ ಲಕ್ಷಣಗಳಾಗಿವೆ. 60 ವರ್ಷ ಮೇಲ್ಪಟ್ಟವರು, ಅಪೌಷ್ಟಿಕರಲ್ಲಿ ಈ ರೋಗ ಆವರಿಸುವ ಸಾಧ್ಯತೆ ಹೆಚ್ಚಿದೆ. ಇಂಥ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗೀತಾ, ಮಲೇರಿಯಾ ಮೇಲ್ವಿಚಾರಕ ಓಂಕಾರ ಜಂತೇಕಾರ್, ಆರೋಗ್ಯ ಇಲಾಖೆ ಸಿಬ್ಬಂದಿ ರಾಮಕೃಷ್ಣ, ಸುನೀಲ್, ಸಂದೀಪ್, ಶಿಕ್ಷಕರಾದ ಅಂಬಿಕಾ, ಭಾಗ್ಯ, ಶಶಿಕಲಾ, ವಿಜಯಲಕ್ಷ್ಮೀ, ಮುನ್ನಿ, ರಮೇಶ, ಸಿದ್ದಣ್ಣ, ಸುಮಾ, ನಾಗರತ್ನ ಇತರರಿದ್ದರು.