ಜಿಲ್ಲೆ

ದಸರಾ ಆನೆಗಳಿಗೆ ತಣ್ಣೀರಿನ ಮಜ್ಜನ

ಮೈಸೂರು: ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ಬುಧವಾರ ಜಂಬೂ ಸವಾರಿ ಮೆರವಣಿಗೆಗೆ ತಾಲೀಮು ನಡೆಯಿತು.

ಅರಮನೆ ಆವರಣದಿಂದ ಬೆಳಗ್ಗೆ ಹೊರಟ ಗಜಪಡೆ ಬಲರಾಮ ದ್ವಾರದ ಮೂಲಕ ಹೊರ ಬಂದು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣವನ್ನು ಪ್ರವೇಶಿಸಿತು. ನಂತರ ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಜಿರಾವ್ ರಸ್ತೆ, ಆಯುರ್ವೇದ ವೃತ್ತ ಮೂಲಕ ಸಾಗಿ ಆರ್‌ಎಂಸಿ ವೃತ್ತ ತಲುಪಿ ನಂತರ ಅದೇ ಮಾರ್ಗದಲ್ಲಿ ಹಿಂತಿರುಗಿತು. ಸಂಜೆ ಅರಮನೆ ಆವರಣದಿಂದ ಆಯುರ್ವೇದ ವೃತ್ತದವರೆಗೆ ತೆರಳಿ ಹಿಂತಿರುಗಿತು. ತಾಲೀಮಿನಲ್ಲಿ ಪಾಲ್ಗೊಂಡ ಆನೆಗಳಿಗೆ ಮಜ್ಜನ ಹಾಗೂ ವಿಶೇಷ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ.