ಜಿಲ್ಲೆ

ಕೆಐಒಸಿಎಲ್‌ನಲ್ಲಿ ಕೋಕ್ ಓವನ್ ಘಟಕಕ್ಕೆ ಕೇಂದ್ರ ಸಚಿವ ರಾಮಚಂದ್ರ ಪ್ರಸಾದ್‌ ಸಿಂಗ್‌ ಶಂಕುಸ್ಥಾಪನೆ

reportermng

ಮಂಗಳೂರು: ಕೇಂದ್ರ ಉಕ್ಕುಖಾತೆ ಸಚಿವ ರಾಮಚಂದ್ರ ಪ್ರಸಾದ್‌ ಸಿಂಗ್ ಅವರು ಭಾನುವಾರ ಪಣಂಬೂರಿನ ಕೆ.ಐ.ಒ.ಸಿ.ಎಲ್ ಲಿಮಿಟೆಡ್ ನ ಬ್ಲಾಸ್ಟ್ ಫರ್ನೇಸ್ ಘಟಕದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಕೋಕ್ ಓವನ್ ಘಟಕದ ಭೂಮಿಪೂಜೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು‌.
ಈ ಸಂದರ್ಭದಲ್ಲಿ ಕೆಐಒಸಿಎಲ್ ನ ಲಿಮಿಟೆಡ್ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕ ಸಾಮಿನಾಥನ್, ಕೇಂದ್ರ ಉಕ್ಕು ಸಚಿವಾಲಯದ ಜಂಟಿ‌ಕಾರ್ಯದರ್ಶಿ ಟಿ.ಶ್ರೀನಿವಾಸ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.