ಜಿಲ್ಲೆ

ಕರುನಾಡ ಕಾಫಿಗೆ ಬ್ರಾಂಡ್

ಸುನಿಲ್ ಪೊನ್ನೇಟಿ

ಮಡಿಕೇರಿ

ಭಾರತದ ಕಾಫಿ ಅತ್ಯುತ್ತಮ ಕಾಫಿ. ಇದನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಮತ್ತು ಇಡೀ ಜಗತ್ತು ಇದನ್ನು ಪ್ರೀತಿಸುತ್ತದೆ..ಇದು ಪ್ರಧಾನಿ ನರೇಂದ್ರ ಮೋದಿ ತಮ್ಮ 127ನೇ ಆವೃತ್ತಿಯ ಮನ್ ಕಿ ಬಾತ್‌ನಲ್ಲಿ ಭಾನುವಾರ ಆಡಿದ ಮಾತು. ಈ ಸಂದರ್ಭ ಅವರು ದೇಶದಲ್ಲಿ ಕಾಫಿ ಬೆಳೆಯುವ ಪ್ರದೇಶಗಳ ಪ್ರಸ್ತಾಪ ಮಾಡುತ್ತಾ ಕರ್ನಾಟಕದ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನವನ್ನೂ ಉಲ್ಲೇಖಿಸಿದ್ದಾರೆ. ಕಾಫಿ ಬಗೆಗಿನ ಪ್ರಧಾನಿ ಅವರ ಮಾತು ಕಾಫಿ ಮಂಡಳಿಯ 7 ಬೀನ್ಸ್ ನಿಂದ 7 ಲಕ್ಷ ಟನ್ ಎನ್ನುವ ಪರಿಕಲ್ಪನೆ ಸಾಕಾರಕ್ಕೆ ಪೂರಕವಾಗಿದೆ ಅಲ್ಲದೆ ಕಾಫಿ ಬೆಳೆಗಾರರು, ಕಾಫಿ ಉದ್ಯಮಿಗಳು ಹಾಗೂ ಕಾಫಿಯನ್ನು ನಂಬಿರುವವರಿಗೆ ಇದು ಸ್ಫೂರ್ತಿದಾಯಕ ಆಗಿದೆ ಎನ್ನುತ್ತಾರೆ ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್ ದೇವವೃಂದ.

ಭಾರತದಲ್ಲಿ ಬೆಳೆಯುವ ಕಾಫಿಯಲ್ಲಿ ಶೇ. 71ರಷ್ಟು ಕಾಫಿಯನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. 2024-25ರ ಅಂದಾಜಿನ ಪ್ರಕಾರ ಚಿಕ್ಕಮಗಳೂರಿನಲ್ಲಿ 91,400 ಮೆಟ್ರಿಕ್ ಟನ್, ಕೊಡಗಿನಲ್ಲಿ 1,21,600 ಮೆಟ್ರಿಕ್ ಟನ್ ಹಾಗೂ ಹಾಸನದಲ್ಲಿ 43 ಸಾವಿರ ಮೆಟ್ರಿಕ್ ಟನ್ ಕಾಫಿ ಬೆಳೆಯಲಾಗುತ್ತಿದೆ. ಈ ಮೂರು ಜಿಲ್ಲೆಯಿಂದ ಕಾಫಿ ಮೂಲಕ 10 ಸಾವಿರ ಕೋಟಿ ರೂ. ವಿದೇಶಿ ವಿನಿಮಯ ಬರುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕಾಫಿ ಬೆಳವಣಿಗೆ ಉತ್ತಮವಾಗಿದೆ. ಮಾರುಕಟ್ಟೆಯ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಸಂಬAಧಿಸಿದAತೆ ಎಲ್ಲಾ ಸಿದ್ಧತೆಗಳೂ ದೇಶದಲ್ಲಿ ನಡೆದಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ಪ್ರಧಾನಿ ಅವರು ತಮ್ಮ ಮನ್ ಕಿ ಬಾತ್‌ನಲ್ಲಿ ಕಾಫಿ ಪ್ರಸ್ತಾಪ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

2047ಕ್ಕೆ 7 ಲಕ್ಷ ಟನ್ ಕಾಫಿ ಬೆಳೆಯುವ ಗುರಿಯನ್ನು ಭಾರತೀಯ ಕಾಫಿ ಮಂಡಳಿ ಇಟ್ಟುಕೊಂಡಿದೆ. ಇದಕ್ಕೆ ಬೇಕಾದ ತಾಂತ್ರಿಕ ಅಗತ್ಯತೆಗಳನ್ನು ಸದ್ಯದಲ್ಲೇ ಪರಿಚಯಿಸಲಾಗುತ್ತಿದೆ. ಇದರ ಜತೆಗೆ ಆಂತರಿಕ ಮಾರುಕಟ್ಟೆ ಮತ್ತು ವಿದೇಶಿ ಮಾರುಕಟ್ಟೆ ವಿಸ್ತರಣೆಗೂ ಯೋಜನೆ ರೂಪಿಸಲಾಗಿದೆ. ಅಷ್ಟರ ಒಳಗೆ 50 ಸಾವಿರ ಕೋಟಿ ರೂ. ಆದಾಯ ಕಾಫಿ ರಫ್ತುವಿನಿಂದ ಬರಬೇಕು ಎನ್ನುವ ಗುರಿಯೂ ಇದೆ. ಈ ರೀತಿ ಆಗುವುದರಿಂದ ಕಾಫಿ ಬೆಳೆಗಾರರಿಗೆ ಮಾತ್ರವಲ್ಲದೆ ಕಾಫಿಯನ್ನು ಅವಲಂಬಿಸಿರುವ ಎಲ್ಲರಿಗೂ ಲಾಭ ಆಗುತ್ತದೆ.

ನಾಗಲ್ಯಾಂಡ್‌ನAಥ ರಾಜ್ಯದಲ್ಲಿ ಸ್ವತಃ ಮುಖ್ಯಮಂತ್ರಿ ಅವರೇ ಖುದ್ದಾಗಿ ಕಾಫಿ ಬೆಳೆಯುವ ಪ್ರದೇಶ ವಿಸ್ತರಣೆಗೆ 1 ಲಕ್ಷ ಎಕರೆ ಜಾಗ ಕೊಡುವುದಾಗಿ ಹೇಳಿದ್ದಾರೆ. ಆಂಧ್ರದಲ್ಲೂ ಅಲ್ಲಿನ ಮುಖ್ಯಮಂತ್ರಿ ಕಾಫಿ ಬೆಳೆಯಲು ಸಂಪೂರ್ಣ ಸಹಕಾರ ಕೊಡುತ್ತಿದ್ದಾರೆ. ಅಲ್ಲಿ ಕಾಫಿ ಹಬ್ ಮಾಡುವ ಚಿಂತನೆ ನಡೆದಿದೆ. ಈ ರೀತಿಯ ಸಹಕಾರ ಕರ್ನಾಟಕ ಸರ್ಕಾರದಿಂದಲೂ ಕಾಫಿ ಬೆಳೆಗಾರರಿಗೆ ಸಿಕ್ಕಿದರೆ ಇನ್ನೂ ಉತ್ತಮ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ಕಾಫಿ ಮಂಡಳಿ ಎಲ್ಲಾ ರೀತಿಯ ನೆರವು ನೀಡಲಿದೆ ಎನ್ನುವ ಭರವಸೆ ಕೊಡುತ್ತಾರೆ ದಿನೇಶ್ ದೇವವೃಂದ.

ಪ್ರಧಾನಿ ಮಾತಿಗೆ ಪೂರಕವಾಗಿ ಕರ್ನಾಟಕದಲ್ಲಿ 2.5 ಸಾವಿರ ಮಹಿಳೆಯರಿಗೆ ಕಾಪೀ ಮಂಡಳಿಯಿAದ ಕಾಫಿ ಹೌಸ್ ಕಿಯೋಸ್ಕ್ ಮಾಡಿಕೊಡಲಾಗುತ್ತಿದೆ. ಈ ಸಂಬAಧ ಈಗಾಗಲೇ ತರಬೇತಿ ಕಾರ್ಯ ನಡೆದಿದೆ. ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಒಂದು ಕಾಫಿ ಹೌಸ್ ಕಿಯೋಸ್ಕ್ ನಡೆÀಯತ್ತಿದೆ. ಪ್ರಧಾನಿ ಅವರಿಗೆ ಕಾಫಿ ಬಗ್ಗೆ ಇಷ್ಟು ವಿಷಯ ಗೊತ್ತಿದೆ ಅಂದರೆ ಕಾಫಿಗೆ ಸಂಬAಧಿಸಿದAತೆ ನಮಗೆ ಬೇಕಾಗಿದ್ದನ್ನು ಅವರಿಂದ ಕೇಳಲು ಅನುಕೂಲ ಆಗುತ್ತದೆ ಎನ್ನುತ್ತಾರೆ ದಿನೇಶ್ ದೇವವೃಂದ.