ಜಿಲ್ಲೆ

ಕಾಫಿ ಬೋರ್ಡ್ ಅಧ್ಯಕ್ಷರನ್ನು ಭೇಟಿ ಮಾಡಿದ ಬೆಳೆಗಾರರ ನಿಯೋಗ

ಸುನಿಲ್ ಪೊನ್ನೇಟಿ

ಮಡಿಕೇರಿ:

ಬೆಂಗಳೂರಿನ ಕಾಫಿ ಬೋರ್ಡ್ ಕಚೇರಿಯಲ್ಲಿ ಕಾಫಿ ಬೋರ್ಡ್ ಅಧ್ಯಕ್ಷ ದಿನೇಶ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂರ್ಮ ರಾವ್ ಅವರನ್ನು ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ವತಿಯಿಂದ ಅಧ್ಯಕ್ಷ ಎನ್.ಎಂ. ರವಿ ಕಾಳಪ್ಪ ನೇತೃತ್ವದಲ್ಲಿ ಗುರುವಾರ ಭೇಟಿ ಮಾಡಲಾಯಿತು.

ಬೆಳೆಗಾರರ ಸಂಘ ಹಾಗೂ ಕಾಫಿ ಬೋರ್ಡ್ ಮಧ್ಯೆ ಇರುವ ವ್ಯವಹಾರ, ಸಂಘ ಕಾಫಿ ಬೋರ್ಡ್ಗೆ ಪಾವತಿಸಲು ಬಾಕಿ ಇರುವ ಬಡ್ಡಿಯನ್ನು ಮನ್ನಾ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಮಾಡಲಾಯಿತು. ಮುಂದೆ ಸಂಘದ ವತಿಯಿಂದ ಸಂಘದ ಚೇತರಿಕೆ ಹಾಗೂ ಅಭಿವೃದ್ಧಿಯ ಬಗ್ಗೆ ಕೆಲವು ಯೋಜನೆಗಳನ್ನು ರೂಪಿಸಲು ಕಾಫಿ ಬೋರ್ಡ್ ನಿಂದ ಸಂಪೂರ್ಣ ಸಹಕಾರ ನೀಡುವಂತೆ ಕೋರಲಾಯಿತು. ಇದಕ್ಕೆ ಕಾಫಿ ಬೋರ್ಡ್ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸುರೇಶ್ ಮಾಯಾಮುಡಿ, ಕಾಫಿ ಬೋರ್ಡ್ ನಿರ್ದೇಶP ತಳೂರು ಕಿಶೋರ್ ಕುಮಾರ್, ನಿರ್ದೇಶಕರುಗಳಾದ ತಾಕೇರಿ ಪೊನ್ನಪ್ಪ, ಹೊಸೂರು ಸತೀಶ್, ರಾಬಿನ್ ದೇವಯ್ಯ, ಕಾಕೂರು ಸಂದೀಪ್, ಸಂಘದ ಉಪ ಕಾರ್ಯದರ್ಶಿ ದೇಚಮ್ಮ, ಸಂಘದ ವ್ಯವಸ್ಥಾಪಕ ನಾಣಯ್ಯ ಇದ್ದರು.