ಮಡಿಕೇರಿ:
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವ ಕಾರಣ ಕಾಫಿ ಬೆಳೆಗಾರರು ಆತಂಕದಲ್ಲಿದ್ದಾರೆ. ಜಾಸ್ತಿ ಮಳೆ ಬೀಳುತ್ತಿರುವುದರಿಂದ ಗಿಡದಲ್ಲೇ ಕಾಫಿ ಕೊಳೆಯುವುದು, ಕಾಯಿ ಉದುರುವುದು ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಕಂಡು ಬರುತ್ತಿದೆ. ಮಳೆ ಹೀಗೆಯೇ ಮುಂದುವರಿದರೆ ಕಾಫಿ ಬೆಳೆಗಾರರು ದೊಡ್ಡ ಪ್ರಮಾಣದಲ್ಲಿ ನಷ್ಟ ಎದುರಿಸುವ ಸಾಧ್ಯತೆ ಇದ್ದು, ಹತೋಟಿ ಕ್ರಮಗಳ ಬಗ್ಗೆ ತಜ್ಞರು ಹಲವು ಸಲಹೆಗಳನ್ನು ಕೊಟ್ಟಿದ್ದಾರೆ.
ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಕಾಫಿಗೆ ಅಗ್ರ ಸ್ಥಾನವಿದೆ. ಜಿಲ್ಲೆಯ ಕೃಷಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಕಳೆದ ಕೆಲವು ದಶಕಗಳಿಂದ ಕಾಫಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಭಾರತೀಯ ಕಾಫಿ ಮಂಡಳಿ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 1,28,720 ಮೆಟ್ರಿಕ್ ಟನ್ ಕಾಫಿ ಬೆಳೆಯಲಾಗಿದೆ. ಪ್ರಸ್ತುತ ಸಾಲಿನಲ್ಲಿ 1,30,285 ಮೆಟ್ರಿಕ್ ಟನ್ ಕಾಫಿ ಬೆಳೆಯುವ ಅಂದಾಜು ಮಾಡಲಾಗಿದೆ. ವರ್ಷದಿಂದ ವರ್ಷಕ್ಕೆ ಕಾಫಿ ಬೆಳೆಯುವ ಪ್ರದೇಶದ ವಿಸ್ತರಣೆ ಜತೆಯಲ್ಲಿ ಉತ್ಪಾದನೆಯೂ ಹೆಚ್ಚಾಗುತ್ತಿರುವುದು ಅಂಕಿ-ಅAಶಗಳಿAದ ಕಂಡು ಬರುತ್ತಿದೆ.
ಅಕಾಲಿಕ ಮಳೆ, ಮಳೆಯ ಕೊರತೆ ಕಾರಣದಿಂದ ಈ ಹಿಂದಿನ ವರ್ಷಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಕಾಫಿಯ ಉತ್ಪಾದನೆ ಆಗಿರಲಿಲ್ಲ. ಆದರೆ ಈ ಬಾರಿ ಸಕಾಲದಲ್ಲಿ ಮಳೆ ಬಂದಿದ್ದು, ಕಾಫಿ ತೋಟಗಳಲ್ಲಿ ಉತ್ತಮ ರೀತಿಯಲ್ಲಿ ಹೂವು ಅರಳಿ ಕಾಫಿ ಬೆಳೆಗಾರರಲ್ಲಿ ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಮೂಡಿಸಿತ್ತು. ಇದರ ಜತೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬೆಲೆಯೂ ಉತ್ತಮ ಆಗಿರುವುದು ಕೃಷಿಕರ ಖುಷಿಗೆ ಕಾರಣವಾಗಿತ್ತು. ಆದರೆ ಮೇ ತಿಂಗಳ ನಂತರ ಸುರಿಯುತ್ತಿರುವ ಮಳೆ ಎಲ್ಲಾ ನಿರೀಕ್ಷೆಗಳನ್ನು ಹುಸಿ ಮಾಡುವಂತೆ ಕಂಡುಬರುತ್ತಿದೆ.
ಜಿಲ್ಲೆಯ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ದಿನಗಳಲ್ಲೇ ಹೆಚ್ಚು ಮಳೆಯಾಗುವುದರಿಂದ, ಅಕಾಲಿಕ ಕಾಫಿ ಉದುರುವಿಕೆ, ಕೊಳೆರೋಗ ಹಾಗೂ ಕಾಫಿ ತೊಟ್ಟು ಕೊಳೆಯುವಿಕೆ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ ಶೇ. 25ರಷ್ಟು ಹೆಚ್ಚು ಮಳೆಯಾಗಿದೆ. ಮುಂಗಾರು ಆರಂಭವಾದ ನಂತರ ಶೇ 16ರಷ್ಟು ಹೆಚ್ಚು ಮಳೆ ಬಂದಿದೆ. ಮೇ ತಿಂಗಳಿನಲ್ಲಿ ಶೇ. 340ಕ್ಕೂ ಅಧಿಕ ಮಳೆಯಾಗಿದೆ. ಸೋಮವಾರಪೇಟೆ ತಾಲೂಕು ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 420 ಸೆಂ.ಮೀ.ನಷ್ಟು ಮಳೆ ಮಳೆ ಈಗಾಗಲೇ ದಾಖಲಾಗಿದೆ. ಕಳೆದ ವರ್ಷ ಕೇವಲ 125ರಿಂದ 130 ಸೆಂ.ಮೀ. ಮಳೆಯಾಗಿತ್ತು. ಜಿಲ್ಲೆಯಲ್ಲಿ ಮೇನಿಂದಲೇ ಮಳೆ ಪ್ರಾರಂಭವಾಗಿದ್ದರಿAದ ಶೀತಮಯ ವಾತಾವರಣ ನಿರ್ಮಾಣ ಆಗಿದ್ದು, ಕಾಫಿ ಮೇಲೆ ವ್ಯತ್ಯರಿಕ್ತ ಪರಿಣಾಮ ಬೀರುತ್ತಿದೆ.
ಮಡಿಕೇರಿ, ಶನಿವಾರಸಂತೆ, ಸೋಮವಾರಪೇಟೆಯ ಕೆಲವು ಭಾಗ, ದಕ್ಷಿಣ ಕೊಡಗಿನ ಬಿರುನಾಣಿ, ಟಿ.ಶೆಟ್ಟಿಗೇರಿ, ಹುದಿಕೇರಿ, ಶ್ರೀಮಂಗಲ, ಬಿ.ಶೆಟ್ಟಿಗೇರಿ ಸೇರಿದಂತೆ ಹಲವೆಡೆ ಈಗಾಗಲೇ ಕಾಫಿ ಉದುರುತ್ತಿರುವುದರ ಬಗ್ಗೆ ಕಾಫಿ ಬೆಳೆಗಾರರು ಆತಂಕ ತೋಡಿಕೊಂಡಿದ್ದಾರೆ. ಮಳೆ ಹೆಚ್ಚಾಗಿರುವ ಎಲ್ಲಾ ಪ್ರದೇಶಗಳಲ್ಲೂ ಬಹುತೇಕ ಇದೇ ಪರಿಸ್ಥಿತಿ ಕಂಡುಬರುತ್ತಿದೆ. ಇದರಿಂದ ಕಾಫಿ ಉತ್ಪಾದನೆ ಕುಂಠಿತವಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗುವ ಆತಂಕದಿAದ ಬೆಳೆಗಾರರು ಕಂಗಾಲಾಗಿದ್ದಾರೆ.
ಸಾಮಾನ್ಯವಾಗಿ ಜೂನ್ ತಿಂಗಳಿನಿAದ ಆಗಸ್ಟ್ ತಿಂಗಳು ಕಾಫಿ ಬೀಜದ ಬೆಳವಣಿಗೆಯ ಹಂತವಾಗಿದೆ. ಈ ಸಮಯದಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಅರೇಬಿಕಾ ಕಾಫಿಯಲ್ಲಿ ಶೇ. 5 ರಿಂದ 8 ಮತ್ತು ರೋಬಸ್ಟಾ ಕಾಫಿಯಲ್ಲಿ ಶೇ. 10 ರಷ್ಟು ಅಕಾಲಿಕ ಕಾಫಿ ಉದುರುವುದು ಕಂಡುಬರುತ್ತಿದೆ. ಜುಲೈ ತಿಂಗಳಿನಲ್ಲಿ ಮುಂಗಾರು ಮಳೆ ಚುರುಕಾಗಿದ್ದು ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ಕಾಫಿಗೆ ಕೊಳೆ ರೋಗ ಜಿಲ್ಲೆಯಾದ್ಯಂತಹ ತೀವ್ರವಾಗಿದ್ದು, ಕಾಫಿ ಉದುರುವ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅತಿವೃಷ್ಟಿ ಮತ್ತು ಇದರಿಂದ ಕಾಫಿ ಉದುರುವಿಕೆ, ಕೊಳೆರೋಗ ಮತ್ತಿತರ ಕಾರಣಗಳಿಂದ ಆತಂಕದಲ್ಲಿ ಇರುವ ರೈತರಿಗೆ ನೆರವು ನೀಡಲು ಗೋಣಿಕೊಪ್ಪಲಿನ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ಮುಂದಾಗಿದೆ. ಜಿಲ್ಲೆಯ ಕಾಫಿ ಬೆಳೆಯುತ್ತಿರುವ ರೈತರಿಗೆ ಕಾಫಿಯಲ್ಲಿ ಅಕಾಲಿಕ ಕಾಫಿ ಉದುರುವಿಕೆ, ಕೊಳೆರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯ ಹತೋಟಿ ಬಗ್ಗೆ ಸಮಗ್ರ ಮಾಹಿತಿ ಕೊಡುತ್ತಿದ್ದಾರೆ. ಅಲ್ಲಿಯ ತಜ್ಞರ ಸಲಹೆಗಳನ್ನು ಅನುಸರಿಸುವ ಮೂಲಕ ಕಾಫಿಯಲ್ಲಿ ಅಕಾಲಿಕ ಕಾಫಿ ಉದುರುವಿಕೆ, ಕೊಳೆರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯನ್ನು ಕಡಿಮೆ ಮಾಡಿ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಕೇಂದ್ರದ ತಜ್ಞರು. ಹೆಚ್ಚಿನ ಮಾಹಿತಿಗೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.
ಕಾಫಿ ಉದುರಲು ಕಾರಣಗಳು:
ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಅಕಾಲಿಕ ಮಳೆಯಾದ ಕಾರಣ ಒಂದಕ್ಕಿAತ ಹೆಚ್ಚು ಬಾರಿ ಕಾಫಿಯಲ್ಲಿ ಹೂವಾಗಿ ವಿವಿಧ ಗಾತ್ರದ ಕಾಯಿಗಳ ಬೆಳವಣಿಗೆಯಾಗಿದೆ. ಜೂನ್‌ನಿಂದ ಆಗಸ್ಟ್ ತಿಂಗಳಿನÀ ತನಕ ಹೆಚ್ಚು ಮಳೆಯಾಗುವುದರಿಂದ ಕೊಳೆರೋಗದಿಂದ ಕಾಫಿ ಉದುರುತ್ತದೆ. ಕಾಫಿ ಗಿಡದ ರೆಂಬೆಯಲ್ಲಿ ಹೆಚ್ಚಿನ ಕಾಯಿ ಕಚ್ಚುವುದರಿಂದಲೂ ಕಾಯಿಗಳು ಉದುರುವ ಸಮಸ್ಯೆ ಕಂಡುಬರುತ್ತದೆ. ಜೂನ್ ತಿಂಗಳಿನಿAದ ಆಗಸ್ಟ್ ತಿಂಗಳಿನÀವÀರೆಗೆ ಹೆಚ್ಚು ಮಳೆಯಾಗುವುದರಿಂದ ಬೇರುಗಳು ಉಸಿರಾಡಲು ಸಮಸ್ಯೆಯಾಗುವುರಿಂದಲೂ ಈ ಸಮಸ್ಯೆ ಕಂಡು ಬರುತ್ತದೆ ಎನ್ನುತ್ತಾರೆ ತಜ್ಞರು.
ಹತೋಟಿ ಹೇಗೆ?
ಕಾಫಿ ಉದುರುವಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಹಲವು ಹತೋಟಿ ಕ್ರಮಗ¼ ಬಗ್ಗೆ ಸಲಹೆ ಮಾಡಿದ್ದಾರೆ. ಕಾಫಿ ಉದುರುವಿಕೆ ಸಮಸ್ಯೆ ಕಂಡು ಬಂದಲ್ಲಿ ಪ್ರತಿ ಎಕರೆ ಪ್ರದೇಶಕ್ಕೆ 50 ಕೆ.ಜಿ. ಯೂರಿಯಾವನ್ನು ಎರಚಬೇಕು. ತೋಟಗಳಲ್ಲಿ ನೀರು ನಿಲ್ಲುತ್ತಿದ್ದರೆ, ನೀರನ್ನು ಬಸಿದು ಹೋಗುವಂತೆ ಮಾಡಬೇಕು. ಕೊಳೆ ರೋಗ ಕಡಿಮೆ ಇರುವ ತೋಟಗಳಲ್ಲಿ ಶೇ. 1.0ಯ ಬೋರ್ಡೊ ದ್ರಾವಣ ಮತ್ತು ಪ್ಲನೋಫಿಕ್ಸ್ 50 ಮಿ.ಲೀ. 200 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕೊಳೆ ರೋಗ ಕಂಡು ಬಂದ ತೋಟಗಳಲ್ಲಿ ಪೈರಕ್ಲೋಸ್ಟೋಬಿನ್ + ಏಪಾಕ್ಸಿಕೊನೊಜೋಲ್ 200 ಮಿ.ಲೀ. ಅಥವಾ ಟೆಬ್ಯುಕೊನೋಜೋಲ್ 200 ಮಿ.ಲೀ. ಮತ್ತು ಪ್ಲನೋಫಿûಕ್ಸ್ 50 ಮಿ.ಲೀ. ಮತ್ತು ಅಂಟು ದ್ರಾವಣವನ್ನು 200 ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು ಎನ್ನುವ ಸಲಹೆಗಳನ್ನು ಕೊಟ್ಟಿದ್ದಾರೆ.
ಮಡಿಕೇರಿ ತಾಲೂಕಿನ ಕಾಲೂರು ಹಾಗೂ ಹಟ್ಟಿಹೊಳೆ ಭಾಗದ ಕೆಲವು ಕಡೆ ಕಾಫಿ ಉದುರುತ್ತಿರುವುದು ಕಂಡುಬAದಿದೆ. ಕಾಫಿ ಮಂಡಳಿಯ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ, ಹೆಚ್ಚಾಗಿ ಉದುರುತ್ತಿಲ್ಲ. ಆದರೆ, ಮಳೆ ಕಡಿಮೆಯಾಗದೇ ಹೋದರೆ ಉದುರುವಿಕೆ ಹೆಚ್ಚಾಗಬಹುದು. ಮಳೆ ನಿಂತು ಬಿಸಿಲು ಬಂದರೆ ಪರಿಸ್ಥಿತಿ ಸುಧಾರಿಸಬಹುದು.
ಚಂದ್ರಶೇಖರ್, ಉಪನಿರ್ದೇಶಕ, ಕಾಫಿ ಮಂಡಳಿ