ಮಂಗಳೂರು : ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಸೇವಾ ಸಂಸ್ಥೆ ಸಿಒಡಿಪಿ ಇದರ ಸ್ವರ್ಣ ಮಹೋತ್ಸವ ಸಮಾರಂಭ ನಗರದ ಸಂತ ಸೆಬಾಸ್ಟಿಯನ್ ಚರ್ಚ್ ಸಭಾಭವನದಲ್ಲಿ ನಡೆಯಿತು.
ಮಂಗಳೂರು ಬಿಷಪ್ ಡಾ.ಬಿಷಪ್ ಪೀಟರ್ ಪೌಲ್ ಸಲ್ದಾನ ಅವರು ಕೃತಜ್ಞ ಬಲಿಪೂಜೆ ನೆರವೆರಿಸಿದರು. ಶಿವಮೊಗ್ಗ ಬಿಷಪ್ ಫ್ರಾನ್ಸಿಸ್ ಸೆರಾವೊ, ಫಾ.ಎಡ್ವರ್ಡ್ ಪಿಂಟೊ , ಫಾ.ವಿನ್ಸೆಂಟ್ ಡಿಸೋಜಾ ಉಪಸ್ಥಿತರಿದ್ದರು. ಸಿಒಡಿಪಿಯಲ್ಲಿ ಸೇವೆ ಸಲ್ಲಿಸಿದ ನಿರ್ದೇಶಕರನ್ನು ಉಡುಪಿಯ ಬಿಷಪ್ ಜೆರಾಲ್ಡ್ ಲೋಬೊ ಸನ್ಮಾನಿಸಿದರು. ಸ್ಥಾಪಕ ನಿರ್ದೇಶಕ ಎಡ್ವಿನ್ ಪಿಂಟೊ ಅವರನ್ನು ಗೌರವಿಸಲಾಯಿತು.
ಸಿಒಡಿಪಿ ನಡೆದು ಬಂದ ಹಾದಿಯ ಸಾಕ್ಷೃ ಚಿತ್ರ ಪ್ರದರ್ಶಿಸಲಾಯಿತು. ಬಡವರಿಗೆ ಸೂರು ನೀಡುವ ಕಾರ್ಯಕ್ಕೆ ದಾನ ನೀಡಿದ ಅನಿವಾಸಿ ಭಾರತೀಯ ಉದ್ಯಮಿ ಮೈಕಲ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. ಐರಿನ್ ರೆಬೆಲ್ಲೊ ಮತ್ತು ಫ್ರಾನ್ಸಿಸ್ ಕಾರ್ಯಕ್ರಮ ನಿರೂಪಿಸಿದರು.