ಜಿಲ್ಲೆ

ಕೊಡವ ನ್ಯಾಷನಲ್ ಕೌನ್ಸಿಲ್ ಪ್ರತಿಭಟನೆ

reportermys

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡವ ಲ್ಯಾಂಡ್ ಸ್ವಾಯತ್ತತೆ ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ತಮ್ಮ ೯ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಕೊಡವ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಸಂವಿಧಾನದಲ್ಲಿ ಗುರುತಿಸಲ್ಪಡದಿರುವ ಕೊಡವ ಪ್ರಾಚೀನ ಬುಡಕಟ್ಟಿನ ಶಾಸನಬದ್ಧ ಆಶೋತ್ತರಗಳನ್ನು ಪರಿಗಣಿಸಲು ಸುಗ್ರೀವಾಜ್ಞೆ ಹೊರಡಿಸಬೇಕೆಂದು ಆಗ್ರಹಿಸಿದ್ದಾರೆ. ತಮ್ಮ ಬೇಡಿಕೆಯ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ, ಉಪವಿಭಾಗಾಧಿಕಾರಿ ಸತೀಶ್ ಉಳ್ಳಾಲ್ ಮೂಲಕ ಸಂಬಂಧಿಸಿದವರಿಗೆ ಸಲ್ಲಿಸಲಾಯಿತು.

ಸಂತಾಲ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮುರವರು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿರುವುದನ್ನು ಕೊಡವ ಮೂಲ ವಂಶಸ್ತ ಜನಾಂಗೀಯ ಬುಡಕಟ್ಟು ಕುಲದ ಪರವಾಗಿ ಸಿಎನ್‌ಸಿ ಅಭಿನಂದಿಸುತ್ತದೆ. ಸಂವಿಧಾನದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಸುದಿನವು ಕೊಡವರಂತಹ ಅತ್ಯಂತ ಸೂಕ್ಷ್ಮ ನಗಣ್ಯ ಬುಡಕಟ್ಟು ಸಮುದಾಯದವರ ಪಾಲಿಗೆ ಅಸ್ಮರಣೀಯ ದಿನ ಎಂದಿದ್ದಾರೆ.

ಸತ್ಯಾಗ್ರಹದಲ್ಲಿ ಕೂಪದಿರ ಪುಷ್ಪ ಮುತ್ತಣ್ಣ, ಚೋಳಪಂಡ ಜ್ಯೋತಿ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ. ಪಾರ್ವತಿ (ನಿವೃತ್ತ), ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಚೆಂಬಂಡ ಜನತ್‌ಕುಮಾರ್, ಬೊಟ್ಟಂಗಡ ಗಿರೀಶ್, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಪಟ್ಟಮಾಡ ಕುಶ, ಪುಲ್ಲೇರ ಕಾಳಪ್ಪ, ಕಿರಿಯಮಾಡ ಶರೀನ್, ಮಂದಪಂಡ ಮನೋಜ್, ಚೀಯಬೇರ ಸತೀಶ್, ನಂದಿನೆರವಂಡ ವಿಜು, ಮೇದೂರ ಕಂಠಿ, ಕೂಪದೀರ ಸಾಬು, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ
ಅಯ್ಯಣ್ಣ, ಮಣುವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ಚಂಗಂಡ ಚಾಮಿ ಮತ್ತಿತರರು ಪಾಲ್ಗೊಂಡಿದ್ದರು.