ಜಿಲ್ಲೆ

ಮಲ್ಲಿಕಟ್ಟೆಯಲ್ಲಿ ವಿದ್ಯುತ್‌ ತಂತಿ ಸಹಿತ ಬಸ್‌ ಮೇಲೆ ಉರುಳಿಬಿದ್ದ ತೆಂಗಿನ ಮರ

reportermng

ಮಂಗಳೂರು: ನಗರದ ಮಲ್ಲಿಕಟ್ಟೆ ಜಂಕ್ಷನ್‌ ಬಳಿ ಮಂಗಳವಾರ ಬೆಳಗ್ಗೆ ತೆಂಗಿನ ಮರವೊಂದು ವಿದ್ಯುತ್‌ ತಂತಿ ಸಹಿತ ಬಸ್‌ ಮೇಲೆ ಬಿದಿದ್ದು, ಪ್ರಯಾಣಿಕರು ಅದೃಷ್ಟಾವಶಾತ್‌ ಪಾರಾಗಿದ್ದಾರೆ. ರಸ್ತೆ ಪಕ್ಕದ ಕಂಪೌಂಡ್‌ನಲ್ಲಿದ್ದ ಮರ ಹಠಾತ್‌ ಮುರಿದು ಬಿದ್ದಿದೆ. ಮರದ ಕೆಳಭಾಗದಲ್ಲಿ ವಿದ್ಯುತ್‌ ತಂತಿಗಳಿದ್ದು, ಮರ ಬಿದ್ದ ತಕ್ಷಣ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ಬಸ್‌ನಲ್ಲಿ ಪ್ರಯಾಣಿಕರಿಗೆ ಯಾವುದೇ ಅಪಾಯ ಉಂಟಾಗಿಲ್ಲ. ಬಸ್‌ನ ಮೇಲ್ಭಾಗ ಜಖಂಗೊಂಡಿದೆ. ಬಸ್‌ ಮಂಗಳಾದೇವಿಯಿಂದ ಸುರತ್ಕಲ್‌ ಕಡೆ ಸಾಗುತ್ತಿತ್ತು. ಮೆಸ್ಕಾಂ, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಕ್ಕೆ ಆಗಮಿಸಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮಲ್ಲಿಕಟ್ಟೆ ಜಂಕ್ಷನ್‌ಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ.