ಜಿಲ್ಲೆ

ಕರಾವಳಿಯ ಜನರು ಆಧುನಿಕರೋ, ದೇಸೀ ಪ್ರಜ್ಞೆ ಉಳ್ಳವರೋ? ಖ್ಯಾತ ಲೇಖಕ ನರಹಳ್ಳಿ ಬಾಲಸುಬ್ರಮಣ್ಯ ಅವಲೋಕನ

ವಸಾಹತುಶಾಹಿಯ ದಾಳಿಯನ್ನು ಎದುರಿಸಿಯೂ ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದವರು ಕರಾವಳಿಯ ಜನರು. ಮೊತ್ತ ಮೊದಲು ಆಧುನಿಕತೆ ಪ್ರವೇಶಿಸಿದ್ದೇ ಕರಾವಳಿಯಿಂದ. ಆನಂತರ ಅದು ಇತರ ಭಾಗಗಳಿಗೆ ಪಸರಿಸಿತು. ಆದರೆ ಕರಾವಳಿಯ ಜನರು ಆಧುನಿಕತೆಯನ್ನು ಮೈಗೂಡಿಸಿಕೊಂಡಷ್ಟೇ ಗಾಢವಾಗಿ ದೇಸೀ ಪ್ರಜ್ಞೆಯನ್ನೂ ಉಳಿಸಿಕೊಂಡವರು. ಯಕ್ಷಗಾನದ ಕುರಿತು ಮಾತನಾಡುತ್ತ ಕರಾವಳಿಯನ್ನು ಹೀಗೆ ಅವಲೋಕಿಸಿದವರು ಕನ್ನಡದ ಖ್ಯಾತ ಲೇಖಕ ನರಹಳ್ಳಿ ಬಾಲಸುಬ್ರಮಣ್ಯ ಅವರು. ಸಂದರ್ಭ- ವಿಜಯವಾಣಿ, ದಿಗ್ವಿಜಯ ನ್ಯೂಸ್ ಆಯೋಜಿಸಿದ್ದ ಕ್ಲಬ್‌ಹೌಸ್ ಸಂವಾದ.