ಮಂಗಳೂರು/ಉಡುಪಿ: ದ.ಕ ಜಿಲ್ಲೆಯಲ್ಲಿ ಗುರುವಾರ 297 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 7 ಸೋಂಕಿತರು ಮೃತಪಟ್ಟಿದ್ದಾರೆ. ಇದರಲ್ಲಿ ಇಬ್ಬರು ಹೊರಜಿಲ್ಲೆಯವರು. 5 ಮಂದಿ ಮಂಗಳೂರು ತಾಲೂಕಿನವರು. ಪಾಸಿಟಿವ್ ಬಂದವರ ಪೈಕಿ 160 ಮಂದಿ ಮಂಗಳೂರು ತಾಲೂಕು, 36 ಬಂಟ್ವಾಳ, 14 ಪುತ್ತೂರು, 42 ಸುಳ್ಯ, ಬೆಳ್ತಂಗಡಿ 21 ಹಾಗೂ ಹೊರ ಜಿಲ್ಲೆಯವರು 24 ಮಂದಿ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 11,389ಕ್ಕೆ ಏರಿಕೆಯಾಗಿದ್ದು, ಪ್ರಸ್ತುತ 2372 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ 257 ಮಂದಿ ಗುಣವಾಗಿ ಆಸ್ಪತ್ರೆ ಮತ್ತು ಹೋಮ್ ಐಸೋಲೇಶನ್‌ನಿಂದ ಬಿಡುಗಡೆಯಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 337ಕ್ಕೆ ಏರಿಕೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಗುರುವಾರ 209 ಮಂದಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಮೃತಪಟ್ಟ ಒರ್ವ ಹಿರಿಯ ನಾಗರಿಕರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,913ಕ್ಕೆೆ, ಸಾವಿನ ಸಂಖ್ಯೆ 93ಕ್ಕೆ ಏರಿದೆ. ಗುರುವಾರ 214 ಮಂದಿ ಸೋಂಕಿನಿಂದ ಗುಣವಾಗಿ ಡಿಸ್ಚಾರ್ಜ್ ಆಗಿದ್ದಾರೆ. 969 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 783 ಮಂದಿಯ ವರದಿ ಬರಲು ಬಾಕಿ ಇದೆ. 2623 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲ ಬಾರಿಗೆ ಒಂದೇ ದಿನ 231 ಕೇಸ್
ಕಾಸರಗೋಡು: ಜಿಲ್ಲೆಯಲ್ಲಿ ಮೊದಲ ಬಾರಿಗೆ ಒಂದೇ ದಿನ ಕೋವಿಡ್ ರೋಗ ಬಾಧಿತರ ಸಂಖ್ಯೆ 200ರ ಗಡಿ ದಾಟಿದೆ. 231 ಮಂದಿಯಲ್ಲಿ ಗುರುವಾರ ಕರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರ ಪೈಕಿ 59 ಮಂದಿ ವಿದೇಶದಿಂದ, 121 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು.