ಕಾರವಾರ: ಭಾರತೀಯ ತಟ ರಕ್ಷಕ ದಿನಾಚರಣೆಯ ಅಂಗವಾಗಿ ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ಶನಿವಾರ ಆಯೋಜಿಸಿದ್ದ ಕಲ್ಪಿತ ಕಾರ್ಯಾಚರಣೆ ಗಮನ ಸೆಳೆಯಿತು.
ತಟ ರಕ್ಷಕ ದಳದ ಗಸ್ತು ನೌಕೆಗಳಾದ ವಿಕ್ರಮ, ವೇಗದ ಗಸ್ತು ನೌಕೆಗಳಾದ ಜ್ಯೋತಿ ಬಾ ಪುಲೆ ಹಾಗೂ ಕಸ್ತೂರಬಾ ಗಾಂಽ, ಇಂಟರ್‌ಸೆಪ್ಟರ್ ಬೋಟ್ ಚಾರ್ಲಿ-448 ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.
ಅರಬ್ಬಿ ಸಮುದ್ರದಲ್ಲಿ ಸುಮಾರು 10 ರಿಂದ 12 ನಾಟಿಕಲ್ ಮೈಲ್ ನಡುವೆ ಸಮುದ್ರಕ್ಕೆ ಬಿದ್ದ ಮೀನುಗಾರರ ರಕ್ಷಣೆ, ದೋಣಿಗಳ ರಕ್ಷಣೆ, ಬೆಂಕಿ ಅವಗಢವಾದಲ್ಲಿ ಅದನ್ನು ನಂದಿಸುವ ಅಣಕು ಕಾರ್ಯಾಚರಣೆ ನಡೆಸಲಾಯಿತು. ಅಲ್ಲದೆ, ಗುಂಡು ಹಾರಿಸಿ ಎದುರಾಳಿಯನ್ನು ಹಿಮ್ಮೆಟ್ಟಿಸುವ ಕಾರ್ಯಗಳು ರೋಮಾಂಚನಗೊಳಿಸಿದವು. ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ನಡೆದ ಕಾರ್ಯಾಚರಣೆಗೆ ಕೋಸ್ಟ್ಗಾರ್ಡ್ ಕುಟುಂಬದವರು. ಬಂದರು ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕೋಸ್ಟ್ಗಾರ್ಡ್ನ ಮೀನುಗಾರರ ರಕ್ಷಣೆಗೆ ಸದಾ ಬದ್ಧವಾಗಿದೆ. ಸಮುದ್ರ ಮೂಲಕ ನಡೆಯುವ ಅಕ್ರಮ ಚಟುವಟಿಕೆಗಳನ್ನು ತಡೆಯಲು ನಿರಂತರ ಕಾರ್ಯನಿರ್ವಹಿಸುತ್ತಿದ್ದು, ಈಗ ಆಧುನಿಕ ಶಸ್ತಾçಸ್ತçಗಳೊಂದಿಗೆ ಸನ್ನದ್ಧಗೊಂಡಿದೆ ಎಂದರು.
ಇದನ್ನೂ ಓದಿ: ಸಾಲ ಬಾಧೆ ಮೀನುಗಾರ ಆತ್ಮಹತ್ಯೆ