ಲಿಂಗಸುಗೂರಲ್ಲಿ ಎಸಿ ಅವಿನಾಶ ಶಿಂಧೆಗೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಮನವಿ ಸಲ್ಲಿಸಿದರು. ಮುಖಂಡರಾದ ಶರಣಪ್ಪ ಕಟ್ಟಿಮನಿ, ಆಜಪ್ಪ ಕರಡಕಲ್, ಮೋಹನ ಗೋಸ್ಲೆ, ಹುಲಗಪ್ಪ ಕೆಸರಟ್ಟಿ, ಹುಸೇನಪ್ಪ ಯರಡೋಣಾ, ನಾಗರಾಜ, ತಿಪ್ಪಣ್ಣ ಮೇಗಳಮನಿ, ಅನೀಲಕುಮಾರ, ಲಕ್ಕಪ್ಪ ನಾಗರಾಳ, ಮರಿಸ್ವಾಮಿ ಚಿಕ್ಕಹೆಸರೂರು, ರಮೇಶ ಗೋಸ್ಲೆ, ಬಸವರಾಜ ಬಂಕದಮನಿ, ಬಸವರಾಜ ಕುಣಿಕೆಲ್ಲೂರು, ಪರಶುರಾಮ ಕೆಂಭಾವಿ, ಬಾಲರಾಜ ಗೌಡೂರು, ಅಮರೇಶ ಗೌಡೂರು, ಶಿಶ್ರನಾಥ ಬಂಡಾರಿ, ಈರಪ್ಪ ಹುಲಿಹಾಳ, ಮೌನೇಶ ಗೌಡೂರು, ದುರಗೇಶ ಅಂಕಶದೊಡ್ಡಿ ಇದ್ದರು. 
ಜಿಲ್ಲೆ

ಕೊಲೆಗೈದ ದುಷ್ಕರ್ಮಿಗಳನ್ನು ಬಂಧಿಸಿ

ಪ್ರವೀಣ ಉದುಸಾ ದಲಬಂಜನ್

ಲಿಂಗಸುಗೂರು: ಮುದ್ಲಾಪುರ ಗ್ರಾಮದ ದಲಿತ ಮುಖಂಡ ಪ್ರಸಾದರನ್ನು ಹತ್ಯೆಗೈದ ದುಷ್ಕರ್ಮಿಗಳನ್ನು ಬಂಧನ ಮಾಡಲು ಒತ್ತಾಯಿಸಿ ದಲಿತ ಸಂಘಟನಗಳ ಒಕ್ಕೂಟದ ಮುಖಂಡರು ಪಟ್ಟಣದ ಸಹಾಯಕ ಆಯುಕ್ತ ಅವಿನಾಶ ಸಿಂಧೆಗೆ ಮಂಗಳವಾರ ಮನವಿ ಸಲ್ಲಿಸಿದರು.

ಕೊಲೆಗೈದವರ ವಿರುದ್ಧ ಪ್ರಕರಣ ದಾಖಲಿಸಿ

ಮಾನ್ವಿ ತಾಲೂಕಿನ ಮುದ್ಲಾಪುರ ಗ್ರಾಮದ ಪ್ರಸಾದ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಊರಿನ ಮುಖಂಡರು ಹಾಗೂ ಬೇರೆ ಸಮುದಾಯದವರ ಪ್ರಚೋದನೆಯಿಂದ ದುಷ್ಕರ್ಮಿಗಳು ಕೊಲೆ ಮಾಡಿರುವ ಆರೋಪವಿದೆ. ಪೊಲೀಸರು ತನಿಖೆ ಮಾಡಿ ಕೊಲೆಗೈದವರ ವಿರುದ್ಧ ಪ್ರಕರಣ ದಾಖಲಿಸಿ ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು. ಪ್ರಸಾದ ಅವರ ಹತ್ಯೆಯಿಂದ ಗ್ರಾಮದಲ್ಲಿ ಭಯದ ವಾತವರಣ ಸೃಷ್ಟಿಯಾಗಿದೆ. ಮೃತರ ಕುಟಂಬಕ್ಕೆ ಸೂಕ್ತ ಪೋಲಿಸ್ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಮುಖಂಡರಾದ ಶರಣಪ್ಪ ಕಟ್ಟಿಮನಿ, ಆಜಪ್ಪ ಕರಡಕಲ್, ಮೋಹನ ಗೋಸ್ಲೆ, ಹುಲಗಪ್ಪ ಕೆಸರಟ್ಟಿ, ಹುಸೇನಪ್ಪ ಯರಡೋಣಾ, ನಾಗರಾಜ, ತಿಪ್ಪಣ್ಣ ಮೇಗಳಮನಿ, ಅನೀಲಕುಮಾರ, ಲಕ್ಕಪ್ಪ ನಾಗರಾಳ, ಮರಿಸ್ವಾಮಿ ಚಿಕ್ಕಹೆಸರೂರು, ರಮೇಶ ಗೋಸ್ಲೆ, ಬಸವರಾಜ ಬಂಕದಮನಿ, ಬಸವರಾಜ ಕುಣಿಕೆಲ್ಲೂರು, ಪರಶುರಾಮ ಕೆಂಭಾವಿ, ಬಾಲರಾಜ ಗೌಡೂರು, ಅಮರೇಶ ಗೌಡೂರು, ಶಿಶ್ರನಾಥ ಬಂಡಾರಿ, ಈರಪ್ಪ ಹುಲಿಹಾಳ, ಮೌನೇಶ ಗೌಡೂರು, ದುರಗೇಶ ಅಂಕಶದೊಡ್ಡಿ ಇನ್ನಿತರರಿದ್ದರು.